alex Certify ಅಟ್ಟಹಾಸ ಮೆರೆದ ತಾಲಿಬಾನ್ ಗಳಿಂದ ಮತ್ತೊಂದು ಪೈಶಾಚಿಕ ಕೃತ್ಯ, ಜನಪ್ರಿಯ ಹಾಡುಗಾರ ಫವಾದ್ ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಟ್ಟಹಾಸ ಮೆರೆದ ತಾಲಿಬಾನ್ ಗಳಿಂದ ಮತ್ತೊಂದು ಪೈಶಾಚಿಕ ಕೃತ್ಯ, ಜನಪ್ರಿಯ ಹಾಡುಗಾರ ಫವಾದ್ ಹತ್ಯೆ

ಕಾಬೂಲ್: ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡು ಸರ್ಕಾರ ರಚಿಸಿ ದಲ್ಲಿ ಆಡಳಿತ ನಡೆಸಲು ಮುಂದಾಗಿರುವ ತಾಲಿಬಾನ್ ಭಯೋತ್ಪಾದಕರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಆಫ್ಘಾನಿಸ್ತಾನದ ಖ್ಯಾತ ಗಾಯಕರಾದ ಫವಾದ್ ಕಿಶನ್ ಬಾದ್ ಅವರನ್ನು ಹತ್ಯೆಮಾಡಿದ್ದಾರೆ.

ಹಾಡು ಸೇರಿದಂತೆ ವಿವಿಧ ಬಗೆಯ ಮನರಂಜನೆಯನ್ನು ಬ್ಯಾನ್ ಮಾಡಿರುವ ತಾಲಿಬಾನಿಗಳು ಬಗ್ಲಾನ್ ಪ್ರಾಂತ್ಯದಲ್ಲಿ ಸ್ಥಳೀಯ ಹಾಡು ಕಟ್ಟಿ ಹಾಡುತ್ತಿದ್ದ ಫವಾದ್ ಅವರನ್ನು ಹತ್ಯೆ ಮಾಡಿದ್ದಾರೆ. ತಾಲಿಬಾನಿಗಳ ವಿರುದ್ಧ ಗೀತೆಗಳನ್ನು ರಚಿಸಿ ಫವಾದ್ ಹಾಡುತ್ತಿದ್ದರು. ಉಗ್ರರ ವಿರುದ್ಧ ಸ್ಥಳೀಯರನ್ನು ಪ್ರಚೋದಿಸುತ್ತಿದ್ದರು. ಇದನ್ನು ಸಹಿಸದೆ ಅವರನ್ನು ಹತ್ಯೆಮಾಡಲಾಗಿದೆ. ಕೆಲವು ವದಿನಗಳ ಹಿಂದೆ ತಾಲಿಬಾನ್ ಗಳು ಹಾಸ್ಯನಟನಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...