ನೂರಕ್ಕೂ ಅಧಿಕ ಅಫ್ಘನ್ನರು ಅದರಲ್ಲೂ ವಿಶೇಷವಾಗಿ ಮಹಿಳೆಯರು ಕಾಬೂಲ್ನ ಬೀದಿಗಳಲ್ಲಿ ಪಾಕಿಸ್ತಾನ ವಿರೋಧಿ ರ್ಯಾಲಿ ನಡೆಸಿದ್ದು ಐಎಸ್‌ಐ ಹಾಗೂ ಇಸ್ಲಾಮಾಬಾದ್ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸುವ ಸಲುವಾಗಿ ತಾಲಿಬಾನಿಗಳು ಗುಂಡಿನ ಮಳೆಗೈದಿದ್ದಾರೆ.
ವರದಿಗಳ ಪ್ರಕಾರ , ಕಾಬೂಲ್ನಲ್ಲಿ ಪ್ರತಿಭಟನಾಕಾರರ ಗುಂಪು ಚದುರಿಸಲು ತಾಲಿಬಾನಿಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.
ಅಫ್ಘಾನಿಸ್ತಾನದ ಆಂತರಿಕ ವಿಚಾರದಲ್ಲಿ ಪಾಕಿಸ್ತಾನ ಹಸ್ತಕ್ಷೇಪ ಮಾಡುತ್ತಿದ್ದು ಇದಕ್ಕೆ ವಿರೋಧ ವ್ಯಕ್ತಪಡಿಸಿ ಕಾಬೂಲ್ನಲ್ಲಿ ಪ್ರತಿಭಟನೆ ರ್ಯಾಲಿ ನಡೆಸಲಾಗಿದೆ ಎನ್ನಲಾಗಿದೆ.
ಕಾಬೂಲ್ನಲ್ಲಿ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆದಿದೆ ಎನ್ನಲಾಗಿದೆ. ಪ್ರತಿಭಟನಾಕಾರರು ಕಳೆದ ವಾರದಿಂದ ಪಾಕಿಸ್ತಾನದ ಐಎಸ್‌ಐ ನಿರ್ದೇಶಕರು ತಂಗಿರುವ ಕಾಬೂಲ್ ಸೆರೆನಾ ಹೋಟೆಲ್ ಕಡೆಗೆ ತೆರಳುತ್ತಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಪ್ರತಿಭಟನೆಯ ವಿಡಿಯೋಗಳು ವೈರಲ್ ಆಗಿವೆ .
https://twitter.com/i/status/1435142070335803395
https://twitter.com/MuslimShirzad/status/1435124068437708803?ref_src=twsrc%5Etfw%7Ctwcamp%5Etweetembed%7Ctwterm%5E1435124068437708803%7Ctwgr%5E%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Findiatoday-epaper-indiatoday%2Ftalibanopenfireonantipakistanrallyinkabulashundredsofafghanwomenchantdeathtoisi-newsid-n313429288%3Fs%3Dauu%3D0x576e454da2b0423bss%3Dwsp