
ಕಾಬೂಲ್: ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡು ಸರ್ಕಾರ ರಚಿಸಿ ದಲ್ಲಿ ಆಡಳಿತ ನಡೆಸಲು ಮುಂದಾಗಿರುವ ತಾಲಿಬಾನ್ ಭಯೋತ್ಪಾದಕರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಆಫ್ಘಾನಿಸ್ತಾನದ ಖ್ಯಾತ ಗಾಯಕರಾದ ಫವಾದ್ ಕಿಶನ್ ಬಾದ್ ಅವರನ್ನು ಹತ್ಯೆಮಾಡಿದ್ದಾರೆ.
ಹಾಡು ಸೇರಿದಂತೆ ವಿವಿಧ ಬಗೆಯ ಮನರಂಜನೆಯನ್ನು ಬ್ಯಾನ್ ಮಾಡಿರುವ ತಾಲಿಬಾನಿಗಳು ಬಗ್ಲಾನ್ ಪ್ರಾಂತ್ಯದಲ್ಲಿ ಸ್ಥಳೀಯ ಹಾಡು ಕಟ್ಟಿ ಹಾಡುತ್ತಿದ್ದ ಫವಾದ್ ಅವರನ್ನು ಹತ್ಯೆ ಮಾಡಿದ್ದಾರೆ. ತಾಲಿಬಾನಿಗಳ ವಿರುದ್ಧ ಗೀತೆಗಳನ್ನು ರಚಿಸಿ ಫವಾದ್ ಹಾಡುತ್ತಿದ್ದರು. ಉಗ್ರರ ವಿರುದ್ಧ ಸ್ಥಳೀಯರನ್ನು ಪ್ರಚೋದಿಸುತ್ತಿದ್ದರು. ಇದನ್ನು ಸಹಿಸದೆ ಅವರನ್ನು ಹತ್ಯೆಮಾಡಲಾಗಿದೆ. ಕೆಲವು ವದಿನಗಳ ಹಿಂದೆ ತಾಲಿಬಾನ್ ಗಳು ಹಾಸ್ಯನಟನಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದರು.