alex Certify ತಾಲಿಬಾನ್​ನಿಂದ ಹೊಸ ಧಾರ್ಮಿಕ ಮಾರ್ಗಸೂಚಿ: ಟಿವಿ ಶೋಗಳಲ್ಲಿ ಮಹಿಳಾ ಕಲಾವಿದರಿಗೆ ಕೊಕ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಲಿಬಾನ್​ನಿಂದ ಹೊಸ ಧಾರ್ಮಿಕ ಮಾರ್ಗಸೂಚಿ: ಟಿವಿ ಶೋಗಳಲ್ಲಿ ಮಹಿಳಾ ಕಲಾವಿದರಿಗೆ ಕೊಕ್​..!

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಆಡಳಿತ ಶುರುವಾದಾಗಿನಿಂದ ಮಹಿಳೆಯರ ಮೇಲೆ ದಿನಕ್ಕೊಂದು ರೀತಿಯ ನಿಬಂಧನೆಗಳನ್ನು ವಿಧಿಸಲಾಗುತ್ತಲೇ ಇದೆ. ಕ್ರೀಡೆಯಿಂದ ಮಹಿಳೆಯರನ್ನು ಹೊರಗಿಟ್ಟ ಬೆನ್ನಲ್ಲೇ ಇದೀಗ ಮಹಿಳೆಯನ್ನು ತೋರಿಸುವಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ಟಿವಿ ಚಾನೆಲ್​ಗಳಿಗೆ ಸೂಚನೆ ನೀಡಲಾಗಿದೆ.

ಇದು ಮಾತ್ರವಲ್ಲದೇ ನ್ಯೂಸ್​ ಚಾನೆಲ್​ಗಳಲ್ಲಿ ಮಹಿಳಾ ಪತ್ರಕರ್ತರು ವರದಿ ನೀಡುವಾಗು ಹಿಜಾಬ್​ಗಳನ್ನು ಧರಿಸುವುದು ಕಡ್ಡಾಯ ಎಂದೂ ತಾಲಿಬಾನ್​ ಸಚಿವಾಲಯ ಸೂಚನೆ ನೀಡಿದೆ. ಹಾಗೂ ಪ್ರವಾದಿ ಮೊಹಮ್ಮದ್​ ಅಥವಾ ಇಸ್ಲಾಂ ಧರ್ಮದ ಇತರೆ ಯಾವುದೇ ಗಣ್ಯ ವ್ಯಕ್ತಿಗಳನ್ನು ತೋರಿಸುವಂತಹ ಕಾರ್ಯಕ್ರಮ ಅಥವಾ ಸಿನಿಮಾಗಳನ್ನು ಪ್ರಸಾರ ಮಾಡಬೇಡಿ ಎಂದೂ ಹೇಳಲಾಗಿದೆ.

ಇಸ್ಲಾಂ ಧರ್ಮ ಹಾಗೂ ಅಫ್ಘನ್​ನ ಘನತೆಗೆ ಧಕ್ಕೆ ತರುವಂತೆ ಯಾವುದೇ ಸಿನಿಮಾ ಅಥವಾ ಕಾರ್ಯಕ್ರಗಳನ್ನು ಪ್ರಸಾರ ಮಾಡದಂತೆ ತಡೆ ಹೇರಲಾಗಿದೆ. ಇದು ಯಾವುದೂ ನಿಯಮಗಳಲ್ಲ ಆದರೆ ಧಾರ್ಮಿಕ ಮಾರ್ಗಸೂಚಿಯಾಗಿದೆ ಎಂದು ಸಚಿವಾಲಯದ ವಕ್ತಾರ ಹಕೀಫ್​ ಮೊಹಜೀರ್​ ಹೇಳಿದ್ದಾರೆ.

ಪಾಶ್ಚಿಮಾತ್ಯ ಬೆಂಬಲಿತ ಸರ್ಕಾರಗಳ ಅಡಿಯಲ್ಲಿ 2 ದಶಕಗಳ ಕಾಲ ಸ್ವತಂತ್ರ್ಯ ಮಾಧ್ಯಮವನ್ನು ಹೊಂದಿದ್ದ ಅಫ್ಘಾನಿಸ್ತಾನಕ್ಕೆ ಇದೀಗ ಆಗಸ್ಟ್​ 15ರಿಂದ ಅಧಿಕಾರ ವಹಿಸಿಕೊಂಡಿರುವ ತಾಲಿಬಾನ್ ಇಸ್ಲಾಂ​ ಧರ್ಮದ ಹೆಸರಿನಲ್ಲಿ ನಿಬಂಧನೆಗಳನ್ನು ಹೇರಿದಂತಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...