ಅಫ್ಘಾನಿಸ್ತಾನದಲ್ಲಿರುವ ತಾಲಿಬಾನ್ ಸರ್ಕಾರದ ಉಪ ಪ್ರಧಾನಿ ಮುಲ್ಲಾ ಅಬ್ದುಲ್ ಘನಿ ಬರಾದಾರ್ ಆಡಿಯೋ ಮೆಸೇಜ್ ಕಳುಹಿಸುವ ಮೂಲಕ ತಮ್ಮ ಸಾವಿನ ವದಂತಿಗೆ ತೆರೆ ಎಳೆದಿದ್ದಾರೆ.
ತಾಲಿಬಾನ್ ವಕ್ತಾರ ಮೊಹಮ್ಮದ್ ನಯೀಮ್ ಟ್ವಿಟರ್ನಲ್ಲಿ ಈ ಸಂದೇಶವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ತಾಲಿಬಾನ್ ನಡುವಿನ ಘರ್ಷಣೆಯಲ್ಲಿ ಬರಾದಾರ್ ಸಾವನ್ನಪ್ಪಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂಬ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ತಾಲಿಬಾನ್ ಸಂಘಟನೆ ಹಂಚಿಕೊಂಡಿರುವ ಆಡಿಯೋ ಸಂದೇಶದಲ್ಲಿ ಬರಾದಾರ್ ತಮ್ಮ ಸಾವಿನ ವಿಚಾರವು ಸಂಪೂರ್ಣ ಸತ್ಯಕ್ಕೆ ದೂರವಾದ ಸುದ್ದಿ ಎಂದು ಹೇಳಿದ್ದಾನೆ. ಬರಾದಾರ್ಗೆ ಕೋವಿಡ್ ಸೋಂಕು ತಗುಲಿದೆ ಅಥವಾ ಅವನನ್ನು ಬಾಂಬ್ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗಿತ್ತು.
ಮಾಧ್ಯಮಗಳಲ್ಲಿ ನಾನು ಸಾವನ್ನಪ್ಪಿದ್ದೇವೆ ಎಂಬ ವಿಚಾರವು ಹರಿದಾಡಿತ್ತು. ಆದರೆ ಕಳೆದ ಕೆಲ ದಿನಗಳಿಂದ ನಾನು ಪ್ರವಾಸದಲ್ಲಿದ್ದೆನು. ನಾವೆಲ್ಲರೂ ಕ್ಷೇಮವಾಗಿಯೇ ಇದ್ದೇವೆ. ಮಾಧ್ಯಮಗಳು ಯಾವಾಗಲೂ ಸುಳ್ಳು ವಿಚಾರಗಳನ್ನು ಪ್ರಚಾರ ಮಾಡುತ್ತವೆ. ಆದರೆ ಈ ಎಲ್ಲಾ ಸುಳ್ಳುಗಳನ್ನು ನಾನು ತಳ್ಳಿ ಹಾಕುತ್ತಿದ್ದೇನೆ. ಇಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂಬ ಮಾತನ್ನು ನಾನು 100 ಪ್ರತಿಶತ ದೃಢೀಕರಿಸಿ ಹೇಳುತ್ತಿದ್ದೇನೆ ಎಂದು ಹೇಳಿದ್ದಾನೆ.