alex Certify ಕ್ಷೌರಿಕರಿಗೂ ಕಂಡೀಷನ್‌ ವಿಧಿಸಿದ ತಾಲಿಬಾನ್​….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಷೌರಿಕರಿಗೂ ಕಂಡೀಷನ್‌ ವಿಧಿಸಿದ ತಾಲಿಬಾನ್​….!

ಅಫ್ಘಾನಿಸ್ತಾನದ ಹೆಲ್ಮಡ್​ ಪ್ರಾಂತ್ಯದಲ್ಲಿ ಕ್ಷೌರಿಕರಿಗೆ ಕ್ಷೌರ ಮಾಡುವುದು ಹಾಗೂ ಗಡ್ಡ ಕತ್ತರಿಸುವುದಕ್ಕೆ ನಿರ್ಬಂಧ ಹೇರಿ ತಾಲಿಬಾನ್ ಹೊಸ ನಿಯಮವನ್ನು ಜಾರಿಗೆ ತಂದಿದೆ. ಅಫ್ಘಾನಿಸ್ತಾನದ ದಕ್ಷಿಣ ಭಾಗದಲ್ಲಿರುವ ಹೆಲ್ಮಂಡ್​ ಪ್ರಾಂತ್ಯದಲ್ಲಿ ಸ್ಟೈಲಿಶ್​​ ಕೇಶ ವಿನ್ಯಾಸ ಹಾಗೂ ಗಡ್ಡ ಕತ್ತರಿಸುವವರಿಗೆ ತಾಲಿಬಾನ್​ ನಿಷೇಧ ಹೇರಿದೆ ಎಂದು ಮಾಧ್ಯಮ ವರದಿ ನೀಡಿದೆ.

ತಾಲಿಬಾನ್​ ಈ ಪ್ರದೇಶದಲ್ಲಿ ಕ್ಷೌರಿಕರು ತಲೆಗೂದಲು ಹಾಗೂ ಗಡ್ಡವನ್ನು ಕತ್ತರಿಸುವುದಕ್ಕೆ ನಿಷೇಧ ಹೇರಿದೆ. ಇದು ಇಸ್ಲಾಮಿಕ್​ ಕಾನೂನನ್ನು ಉಲ್ಲಂಘಿಸುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಇಸ್ಲಾಮಿಕ್ ಓರಿಯಂಟೇಶನ್​ ಸಚಿವಾಲಯದ ಅಧಿಕಾರಿಗಳು ಕ್ಷೌರ ಅಂಗಡಿಗಳ ಪ್ರತಿನಿಧಿಗಳ ಜೊತೆ ಲಷ್ಕರ್​ ಗಾಹ್​ನಲ್ಲಿ ನಡೆಸಿದೆ. ಸಭೆಯಲ್ಲಿ ಪುರುಷರಿಗೆ ತಲೆಗೂದಲು ಹಾಗೂ ಗಡ್ಡ ಕತ್ತರಿಸುವುದು ಬೇಡ ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾದ ಆದೇಶದಲ್ಲಿ ಹೇರ್​ ಡ್ರೆಸ್ಸಿಂಗ್​ ಸಲೂನ್​ಗಳಲ್ಲಿ ಸಂಗೀತ ಹಾಗೂ ಸ್ತೋತ್ರಗಳನ್ನು ಪಠಿಸದಂತೆಯೂ ಮನವಿ ಮಾಡಲಾಗಿದೆ ಎನ್ನಲಾಗಿದೆ.

ಈ ಪ್ರದೇಶದಲ್ಲಿ ಅಫ್ಘಾನಿಸ್ತಾನದ ಕ್ಷೌರಿಕರಿಗೆ ಹೇರಲಾಗಿರುವ ನಿರ್ಬಂಧವು ಕ್ಷೌರಿಕರಿಗೆ ಅಸಮಾಧಾನ ತಂದಿದೆ. ಸರ್ಕಾರದಿಂದ ಹೊರಡಿಸಲಾದ ಈ ಆದೇಶದಿಂದ ಜೀವನ ನಡೆಸುವುದು ಕಷ್ಟವಾಗಲಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...