ಅಫ್ಘಾನಿಸ್ತಾನದ ಹೆಲ್ಮಡ್ ಪ್ರಾಂತ್ಯದಲ್ಲಿ ಕ್ಷೌರಿಕರಿಗೆ ಕ್ಷೌರ ಮಾಡುವುದು ಹಾಗೂ ಗಡ್ಡ ಕತ್ತರಿಸುವುದಕ್ಕೆ ನಿರ್ಬಂಧ ಹೇರಿ ತಾಲಿಬಾನ್ ಹೊಸ ನಿಯಮವನ್ನು ಜಾರಿಗೆ ತಂದಿದೆ. ಅಫ್ಘಾನಿಸ್ತಾನದ ದಕ್ಷಿಣ ಭಾಗದಲ್ಲಿರುವ ಹೆಲ್ಮಂಡ್ ಪ್ರಾಂತ್ಯದಲ್ಲಿ ಸ್ಟೈಲಿಶ್ ಕೇಶ ವಿನ್ಯಾಸ ಹಾಗೂ ಗಡ್ಡ ಕತ್ತರಿಸುವವರಿಗೆ ತಾಲಿಬಾನ್ ನಿಷೇಧ ಹೇರಿದೆ ಎಂದು ಮಾಧ್ಯಮ ವರದಿ ನೀಡಿದೆ.
ತಾಲಿಬಾನ್ ಈ ಪ್ರದೇಶದಲ್ಲಿ ಕ್ಷೌರಿಕರು ತಲೆಗೂದಲು ಹಾಗೂ ಗಡ್ಡವನ್ನು ಕತ್ತರಿಸುವುದಕ್ಕೆ ನಿಷೇಧ ಹೇರಿದೆ. ಇದು ಇಸ್ಲಾಮಿಕ್ ಕಾನೂನನ್ನು ಉಲ್ಲಂಘಿಸುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಇಸ್ಲಾಮಿಕ್ ಓರಿಯಂಟೇಶನ್ ಸಚಿವಾಲಯದ ಅಧಿಕಾರಿಗಳು ಕ್ಷೌರ ಅಂಗಡಿಗಳ ಪ್ರತಿನಿಧಿಗಳ ಜೊತೆ ಲಷ್ಕರ್ ಗಾಹ್ನಲ್ಲಿ ನಡೆಸಿದೆ. ಸಭೆಯಲ್ಲಿ ಪುರುಷರಿಗೆ ತಲೆಗೂದಲು ಹಾಗೂ ಗಡ್ಡ ಕತ್ತರಿಸುವುದು ಬೇಡ ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾದ ಆದೇಶದಲ್ಲಿ ಹೇರ್ ಡ್ರೆಸ್ಸಿಂಗ್ ಸಲೂನ್ಗಳಲ್ಲಿ ಸಂಗೀತ ಹಾಗೂ ಸ್ತೋತ್ರಗಳನ್ನು ಪಠಿಸದಂತೆಯೂ ಮನವಿ ಮಾಡಲಾಗಿದೆ ಎನ್ನಲಾಗಿದೆ.
ಈ ಪ್ರದೇಶದಲ್ಲಿ ಅಫ್ಘಾನಿಸ್ತಾನದ ಕ್ಷೌರಿಕರಿಗೆ ಹೇರಲಾಗಿರುವ ನಿರ್ಬಂಧವು ಕ್ಷೌರಿಕರಿಗೆ ಅಸಮಾಧಾನ ತಂದಿದೆ. ಸರ್ಕಾರದಿಂದ ಹೊರಡಿಸಲಾದ ಈ ಆದೇಶದಿಂದ ಜೀವನ ನಡೆಸುವುದು ಕಷ್ಟವಾಗಲಿದೆ ಎಂದು ಹೇಳಿದ್ದಾರೆ.