ನವದೆಹಲಿ: ರಂಜಾನ್ ಸಂದರ್ಭದಲ್ಲೂ ಕೊರೋನಾ ಲಸಿಕೆ ಪಡೆಯಬಹುದಾಗಿದೆ ಎಂದು ಲಖ್ನೋದ ದಾರುಲ್ ಇಫ್ತಾ ಫರಂಗಿ ಮಹಲ್ ಪತ್ವಾ ಹೊರಡಿಸಿದೆ.
ಲಸಿಕೆ ಪಡೆಯುವುದು ಅನೂರ್ಜಿತವಲ್ಲ ಎಂದು ಮುಸ್ಲಿಂ ಧರ್ಮಗುರುಗಳು ತಿಳಿಸಿದ್ದಾರೆ. ಕೊರೊನಾ ಲಸಿಕೆ ಆಹಾರವಲ್ಲ, ಅದನ್ನು ಪಡೆದುಕೊಳ್ಳಬಹುದು ಎಂದು ಹೇಳಲಾಗಿದೆ. ರಂಜಾನ್ ಉಪವಾಸದ ಸಂಧರ್ಭದಲ್ಲಿ ಲಸಿಕೆ ಪಡೆಯುವುದನ್ನು ನಿಲ್ಲಿಸದಿರಿ ಎಂದು ಮನವಿ ಮಾಡಲಾಗಿದೆ.
ಕೊರೋನಾ ಲಸಿಕೆ ರಕ್ತನಾಳ ಸೇರುತ್ತದೆ. ಅದು ಹೊಟ್ಟೆಗೆ ಸೇರುವುದಿಲ್ಲ. ಹಾಗಾಗಿ ಕೊರೋನಾ ಲಸಿಕೆ ಪಡೆದುಕೊಳ್ಳಬಹುದು. ಅದು ಉಪವಾಸದ ಉಲ್ಲಂಘನೆಯಾಗುವುದಿಲ್ಲ ಎಂದು ಹೇಳಲಾಗಿದೆ.