ನವಜಾತ ಶಿಶುಗಳಿಗೆ ಹಾಗೂ ಮೂರು ವರ್ಷದೊಳಗಿನ ಮಕ್ಕಳಿಗೆ ಬಾಟಲಿ ಹಾಲು ಕುಡಿಸುವುದನ್ನು ಅಭ್ಯಾಸ ಮಾಡುವುದುಂಟು. ಇದರಿಂದ ಎಷ್ಟು ಪ್ರಯೋಜನಗಳಿವೆಯೋ, ಅಷ್ಟೇ ದುಷ್ಪರಿಣಾಮಗಳೂ ಇವೆ.
ಇದನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಪ್ರತಿಬಾರಿ ಇದರಲ್ಲಿ ಹಾಲು ಹಾಕಿ ಮಕ್ಕಳಿಗೆ ಕುಡಿಸಿದ ನಂತರ ಬಿಸಿನೀರಿನಲ್ಲಿ ಕುದಿಸಿ ಒಣಗಲು ಇಡುವುದು ಬಹಳ ಮುಖ್ಯ.
ಅದೇ ರೀತಿ ಮಕ್ಕಳು ಹಾಲು ಕುಡಿದು ಸ್ವಲ್ಪ ಭಾಗ ಉಳಿದಿದ್ದರೆ ಮತ್ತೆ ಕುಡಿಯಲು ಕೊಟ್ಟರಾಯಿತು ಎಂದು ಅದನ್ನು ಹಾಗೆ ಬಾಕಿ ಇಡದಿರಿ. ಹಾಲು ಖಾಲಿ ಮಾಡಿ ತೊಳೆದು ಹಾಕಿ. ಹಾಲು ಹಾಕದೆ ಕೇವಲ ನೀರು ಕುಡಿಯಲು ಬಳಸುತ್ತಿದ್ದರೂ ನಿಪ್ಪಲ್ ಸಮೇತ ಸಂಪೂರ್ಣ ಬಾಟಲಿಯನ್ನು ನಿತ್ಯ ಕುದಿಸಬೇಕು.
ಪ್ರತಿ ಬಾರಿ ಒಂದೇ ಬಾಟಲಿ ಬಳಸುವ ಬದಲು ಮೂರು ನಾಲ್ಕು ಬಾಟಲಿ ಇಟ್ಟುಕೊಳ್ಳಿ. ಒಂದಿಲ್ಲವಾದರೆ ಇನ್ನೊಂದನ್ನು ಹೀಗೆ ಬದಲಾಯಿಸುತ್ತಿರಿ. ಒಂದು ತೊಳೆದು ಒಣಗಲು ಇಟ್ಟಾಗ ಇನ್ನೊಂದು ಬಾಟಲಿ ಬಳಸಿ. ಅದು ಸ್ವಚ್ಛವಾಗಿರದಿದ್ದರೆ ಸೂಕ್ಷಾಣು ಉಳಿದುಕೊಂಡಿರದಿದ್ದರೆ ಹಾಲು ಒಡೆಯಬಹುದು.