alex Certify ಮುಟ್ಟಿನ ಸಮಯದಲ್ಲಿ ಈ ಬಗ್ಗೆ ವಹಿಸಿ ಮುನ್ನೆಚ್ಚರ……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಟ್ಟಿನ ಸಮಯದಲ್ಲಿ ಈ ಬಗ್ಗೆ ವಹಿಸಿ ಮುನ್ನೆಚ್ಚರ……!

ಹೆಚ್ಚಿನ ಮಹಿಳೆಯರು ಮುಟ್ಟಿನ ಸಮಯದಲ್ಲಿ ತುಂಬಾ ಚಿಂತೆಗೊಳಗಾಗ್ತಾರೆ. ತಲೆನೋವು, ಬೆನ್ನು ನೋವು, ರಕ್ತಸ್ರಾವದಿಂದ ಕಿರಿಕಿರಿ ಅನುಭವಿಸುತ್ತಾರೆ. ನಿದ್ರೆ ಸರಿಯಾಗಿ ಬರದ ಕಾರಣ ದಿನಚರಿಗೆ ತೊಂದರೆಯಾಗುತ್ತದೆ.

ಆರಂಭದ ಎರಡು ದಿನ ಕಚೇರಿಗೆ ಹೋಗದೆ ಮನೆಯಲ್ಲಿ ವಿಶ್ರಾಂತಿ ಪಡೆಯುವವರಿದ್ದಾರೆ. ಮುಟ್ಟಿನ ಸಮಯದಲ್ಲಿ ಮಾಡುವ ಕೆಲ ತಪ್ಪುಗಳು ಇನ್ನಷ್ಟು ಸಮಸ್ಯೆಗೆ ಕಾರಣವಾಗುತ್ತದೆ. ಮುಟ್ಟಿನ ಸಮಯದಲ್ಲಿ ಕೆಲ ತಪ್ಪುಗಳನ್ನು ಅಪ್ಪಿತಪ್ಪಿಯೂ ಮಾಡಬಾರದು.

ಮುಟ್ಟಿನ ಸಮಯದಲ್ಲಿ ಹೊಟ್ಟೆ, ಕಿಬ್ಬೊಟ್ಟೆ, ಕಾಲು, ತಲೆ ನೋವು ಸಾಮಾನ್ಯ. ಕೆಲವರಿಗೆ ಇದ್ರ ಪ್ರಮಾಣ ಹೆಚ್ಚಿರುತ್ತದೆ. ಮತ್ತೆ ಕೆಲವರಿಗೆ ಕಡಿಮೆಯಿರುತ್ತದೆ. ಈ ನೋವಿನಿಂದ ಮುಕ್ತಿ ಪಡೆಯಲು ಅನೇಕ ಮಹಿಳೆಯರು ನೋವಿನ ಮಾತ್ರೆಗಳನ್ನು ಸೇವಿಸುತ್ತಾರೆ. ಮುಟ್ಟಿನ ಸಮಯದಲ್ಲಿ ನೋವಿನ ಮಾತ್ರೆ ಸೇವನೆಯಿಂದ ದೇಹದಲ್ಲಿರುವ ಒಳ್ಳೆ ಬ್ಯಾಕ್ಟಿರಿಯಾ ಕೂಡ ಸಾವನ್ನಪ್ಪುತ್ತದೆ. ಇದ್ರಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೃದಯಾಘಾತ, ಮೂತ್ರಪಿಂಡ ಸಮಸ್ಯೆ, ಪಿತ್ತಜನಕಾಂಗದಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಮುಟ್ಟಿನ ಸಮಯದಲ್ಲಿ ಬರುವ ರಕ್ತದ ವಾಸನೆಯನ್ನು ಕಡಿಮೆ ಮಾಡಲು ಅನೇಕರು ಸೆಂಟ್ ಬಳಸ್ತಾರೆ. ಆದ್ರೆ ಸೆಂಟ್ ಬಳಕೆ ಅಪಾಯ. ಇದ್ರಿಂದ ಕೆಲ ಸೋಂಕುಗಳು ಹರಡುವ ಸಾಧ್ಯತೆಯಿರುತ್ತದೆ. ಚರ್ಮಕ್ಕೆ ಈ ಸೋಂಕು ಹಾನಿಯುಂಟು ಮಾಡುತ್ತದೆ.

ಮುಟ್ಟಿನ ಸಮಯದಲ್ಲಿ ನೋವು, ಕೆಲಸದ ಒತ್ತಡದ ಮಧ್ಯೆ ಕೆಲವರು ಆಹಾರ ಸೇವನೆ ಬಿಡ್ತಾರೆ. ಆಹಾರ ಸೇವನೆ ಬಿಡುವುದು ಒಳ್ಳೆಯದಲ್ಲ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದೇಹ ಶಕ್ತಿ ಕಳೆದುಕೊಂಡು ದುರ್ಬಲವಾಗುತ್ತದೆ.

ಮುಟ್ಟಿನ ಸಮಯದಲ್ಲಿ ನ್ಯಾಪ್ಕಿನ್ ಬದಲಾವಣೆಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಅನೇಕರು ಒಂದು ದಿನಗಳ ಕಾಲ ಒಂದೇ ನ್ಯಾಪ್ಕಿನ್ ಬಳಸ್ತಾರೆ. ಇದು ಅನೇಕ ಸೋಂಕು ಹರಡಲು ಕಾರಣವಾಗುತ್ತದೆ. ಮೂರು ಗಂಟೆಗೊಮ್ಮೆ ನ್ಯಾಪ್ಕಿನ್ ಬದಲಾಯಿಸುವ ರೂಢಿ ಇಟ್ಟುಕೊಳ್ಳಬೇಕು.

ಸಾಮಾನ್ಯವಾಗಿ ಸ್ಯಾನಿಟರಿ ಪ್ಯಾಡ್ ರೆಯಾನ್ ಹಾಗೂ ಹತ್ತಿಯಿಂದ ಮಾಡಲಾಗುತ್ತದೆ. ರೆಯಾನ್ ಮಿಶ್ರಿತ ಹತ್ತಿಯ ಪ್ಯಾಡ್ ನಲ್ಲಿ ರಾಸಾಯನಿಕ ಹಾಗೂ ಕೀಟನಾಶಕಗಳನ್ನು ಬಳಸಲಾಗಿರುತ್ತದೆ. ಇದು ಮಹಿಳೆಯರ ಫಲವತ್ತತೆ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಸಾವಯವ ಹತ್ತಿಯಿಂದ ಮಾಡಿದ ಪ್ಯಾಡ್ ಬಳಕೆ ಮಾಡಬೇಕು.

ಮುಟ್ಟಿನ ವೇಳೆ ವ್ಯಾಯಾಮವನ್ನು ಅನೇಕರು ಮಾಡುವುದಿಲ್ಲ. ಸದಾ ಹಾಸಿಗೆ ಮೇಲೆ ಮಲಗಿರುತ್ತಾರೆ. ಇದು ಸರಿಯಲ್ಲ. ಮುಟ್ಟಿನ ವೇಳೆ ವೈದ್ಯರ ಸಲಹೆ ಪಡೆದು ಕೆಲವೊಂದು ವ್ಯಾಯಾಮಗಳನ್ನು ಮಾಡಬೇಕಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...