ಕೋಮಲವಾಗಿರುವ ಮಕ್ಕಳ ತ್ವಚೆ ಚಳಿಗಾಲದಲ್ಲಿ ಮತ್ತಷ್ಟು ಸಮಸ್ಯೆಗಳಿಗೆ ಒಳಗಾಗುತ್ತದೆ. ಆ ಸಂದರ್ಭದಲ್ಲಿ ಮಗುವಿನ ತ್ವಚೆಯ ಆರೈಕೆ ಮಾಡುವ ಕೆಲವು ಸಲಹೆಗಳು ಇಲ್ಲಿವೆ.
ಮಗುವಿಗೆ ಹೆಚ್ಚು ಹೊತ್ತು ಸ್ನಾನ ಮಾಡಿಸುವುದು ಒಳ್ಳೆಯದಲ್ಲ. ಹದ ಬಿಸಿನೀರಿನ ಸ್ನಾನಕ್ಕೆ ಐದರಿಂದ ಹತ್ತು ನಿಮಿಷ ಮೀಸಲಿಟ್ಟರೆ ಸಾಕು. ಚಳಿ ಹೆಚ್ಚಿದ್ದರೆ ಎರಡು ದಿನಕ್ಕೊಮ್ಮೆ ಸ್ನಾನ ಮಾಡಿಸಿದರೂ ಸಾಕು. ಸೋಪು ನಿಮ್ಮ ಮಗುವಿನ ತ್ವಚೆಯನ್ನು ಮತ್ತಷ್ಟು ಡ್ರೈ ಮಾಡದಿರಲಿ.
ಸ್ನಾನಕ್ಕೆ ಮುನ್ನ ಮಗುವಿಗೆ ಎಣ್ಣೆಯ ಮಸಾಜ್ ಮಾಡುವುದನ್ನು ಮರೆಯದಿರಿ. ಇದು ಮಗುವಿನ ತ್ವಚೆಯಲ್ಲಿ ಹೆಚ್ಚು ಹೊತ್ತು ತೇವಾಂಶ ಇರುವಂತೆ ನೋಡಿಕೊಳ್ಳುತ್ತದೆ. ಚಳಿಗಾಲದಲ್ಲಿ ತಾಪಮಾನ ಕಡಿಮೆ ಇರುವಾಗ ಮಗುವನ್ನು ಸಾಧ್ಯವಾದಷ್ಟು ಬೆಚ್ಚಗಿಡಿ.
ಮಗುವಿಗೆ ಹಿತಕಾರಿ ಆಗುವ ಬಟ್ಟೆಗಳನ್ನೇ ಧರಿಸಿ. ಇದರಿಂದ ತ್ವಚೆಯ ಸಮಸ್ಯೆಗಳನ್ನು ದೂರ ಮಾಡಬಹುದು. ಮಕ್ಕಳ ಮಾಯಿಸ್ಚರೈಸರ್ ಬಳಸಿ. ಹೀಗಿದ್ದೂ ತ್ವಚೆಯಲ್ಲಿ ಬಿರುಕುಗಳು ಕಾಣಿಸಿಕೊಂಡರೆ ಮಕ್ಕಳ ತಜ್ಞರೊಂದಿಗೆ ಸಮಾಲೋಚನೆ ನಡೆಸಿ.