alex Certify ‘ಲೇಡಿಸ್ ಹಾಸ್ಟೆಲ್’ ಬಾತ್ ರೂಂನಲ್ಲಿ ಕ್ಯಾಮೆರಾ ಇಟ್ಟು ತಗ್ಲಾಕೊಂಡ ಕಾಮುಕ : ವಿದ್ಯಾರ್ಥಿನಿಯರಿಂದ ಗೂಸಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಲೇಡಿಸ್ ಹಾಸ್ಟೆಲ್’ ಬಾತ್ ರೂಂನಲ್ಲಿ ಕ್ಯಾಮೆರಾ ಇಟ್ಟು ತಗ್ಲಾಕೊಂಡ ಕಾಮುಕ : ವಿದ್ಯಾರ್ಥಿನಿಯರಿಂದ ಗೂಸಾ

ಕಲಬುರಗಿ : ಲೇಡಿಸ್ ಹಾಸ್ಟೆಲ್ ಬಾತ್ ರೂಂನಲ್ಲಿ ಕ್ಯಾಮೆರಾ ಇಟ್ಟು ತಗ್ಲಾಕೊಂಡ ಕಾಮುಕನಿಗೆ ವಿದ್ಯಾರ್ಥಿನಿಯರೇ ಗೂಸಾ ಕೊಟ್ಟ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಹಾಸ್ಟೆಲ್ ಒಂದರಲ್ಲಿ ನಡೆದಿದೆ.

ಹಾಸ್ಟೆಲ್ ಇದ್ದ ಏರಿಯಾದಲ್ಲಿ ವಾಸವಾಗಿದ್ದ ಸಲೀಂ ಎಂಬಾತ ಇಂತಹ ಕೃತ್ಯ ಎಸಗಿದ್ದು, ವಿದ್ಯಾರ್ಥಿನಿಯರ ಬಾತ್ ರೂಮ್ ನಲ್ಲಿ ಕ್ಯಾಮೆರಾ ಫಿಕ್ಸ್ ಮಾಡಿದ್ದಾನೆ. ಇದನ್ನು ವಿದ್ಯಾರ್ಥಿನಿಯರು ಗಮನಿಸಿದ್ದು, ಬಾತ್ ರೂಂ ನಿಂದ ಹೊರ ಬಂದ ಸಲೀಂನನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ. ನಂತರ ಅಲ್ಲಿಗೆ ಬಂದ ಸ್ಥಳೀಯರು ಸಲೀಂನನ್ನು ಬಿಡಿಸಿ ಎಸ್ಕೇಪ್ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ನಂತರ ವಿದ್ಯಾರ್ಥಿನಿಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ತಪಾಸಣೆ ನಡೆಸಿ ಸಲೀಂನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...