alex Certify ಅಕ್ಟೋಬರ್ 27ಕ್ಕೆ ಬಿಡುಗಡೆಯಾಗಲಿದೆ ‘ಟಗರು ಪಲ್ಯ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ಟೋಬರ್ 27ಕ್ಕೆ ಬಿಡುಗಡೆಯಾಗಲಿದೆ ‘ಟಗರು ಪಲ್ಯ’

ಉಮೇಶ್ ಕೆ ಕೃಪ ನಿರ್ದೇಶನದ ‘ಟಗರು ಪಲ್ಯ’ಸಿನಿಮಾ ಇದೇ ತಿಂಗಳು ಅಕ್ಟೋಬರ್ 27ರಂದು ರಾಜ್ಯದ್ಯಂತ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರ ತಂಡ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದೆ.

ನಾಗಭೂಷಣ ಮತ್ತು ನೆನಪಿರಲಿ ಪ್ರೇಮ್ ಪುತ್ರಿ ಅಮೃತ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಹಿರಿಯ ನಟಿ ತಾರಾ ಸೇರಿದಂತೆ ರಂಗಾಯಣ ರಘು, ಶರತ್ ಲೋಹಿತಾಶ್ವ, ಬಸಪ್ಪ ಬಿರಾದರ್, ವಾಸುಕಿ ವೈಭವ್, ರವಿ ಹುಣಸೂರು ತೆರೆ ಹಂಚಿಕೊಂಡಿದ್ದಾರೆ.

ಈ ಚಿತ್ರವನ್ನು ಡಾಲಿ ಧನಂಜಯ್ ತಮ್ಮ ಡಾಲಿ ಪಿಚ್ಚರ್ಸ್ ಬ್ಯಾನರ್ ನಡಿ ನಿರ್ಮಾಣ ಮಾಡಿದ್ದು, ಕಲ್ಯಾಣ್ ಮಂಜುನಾಥ್, ಭರತ್ ನಾಯಕ್ ಸಂಗೀತ ಸಂಯೋಜನೆ ನೀಡಿದ್ದಾರೆ. ಎಸ್ ಕೆ ರಾವ್ ಛಾಯಾಗ್ರಾಹಣವಿದ್ದು, ಮಧು ತುಂಬಕೆರೆ ಸಂಕಲನವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...