alex Certify ನಟಿ ಟಬು ವಯಸ್ಸು 51 ಆದರೂ ಮದುವೆಯೇ ಆಗಿಲ್ಲ….! ಅದಕ್ಕೆ ಕಾರಣನಂತೆ ಬಾಲಿವುಡ್‌ ನ ಈ ನಟ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ಟಬು ವಯಸ್ಸು 51 ಆದರೂ ಮದುವೆಯೇ ಆಗಿಲ್ಲ….! ಅದಕ್ಕೆ ಕಾರಣನಂತೆ ಬಾಲಿವುಡ್‌ ನ ಈ ನಟ..!

80-90ರ ದಶಕದಲ್ಲಿ ಟಾಪ್ ಮೋಸ್ಟ್ ಹಿರೋಯಿನ್‌ಗಳ ಲಿಸ್ಟ್‌ಲ್ಲಿ ಕೇಳಿ ಬಂದ ಹೆಸರು ನಟಿ ಟಬು. ಬಹುಭಾಷಾ ತಾರೆಯಾಗಿರೋ ಟಬು ಬಾಲಿವುಡ್‌ನಲ್ಲೂ ನೇಮ್-ಫೇಮ್ ಗಳಿಸಿದವರು. 51 ವರ್ಷದ ಟಬು ಈಗಲೂ ಸ್ಕ್ರೀನ್ ಮೇಲೆ ಬಂದರೆ ಪಡ್ಡೆ ಹೈಕಳು ಫಿದಾ ಆಗಿ ಬಿಡ್ತಾರೆ.

ಅಪರೂಪದ ಸುಂದರಿ, ಸಿನೆಮಾ ಜಗತ್ತಿನಲ್ಲಿ ಹೆಸರು ಮಾಡಿದ ನಟಿ ಟಬು, ಆದರೂ ಅವರಿನ್ನೂ ಮದುವೆಯೇ ಆಗಿಲ್ಲ. ಈ ಬಗ್ಗೆ ಇತ್ತೀಚೆಗೆ ಅವರು ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ತಾವು ಮದುವೆಯಾಗದೇ ಇರುವುದಕ್ಕೆ ಕಾರಣ ಬಾಲಿವುಡ್‌ ನ ಸೂಪರ್‌ಸ್ಟಾರ್‌ ಅಜಯ್ ದೇವಗನ್ ಅಂತ ಹೇಳಿದ್ದಾರೆ.

ಹಿಂದಿ ಸಿನಿ ಜಗತ್ತಿಗೆ ಕಾಲಿಟ್ಟ ನಂತರ ಟಬು ಒಂದಾದ ಮೇಲೆ ಒಂದು ಸೂಪರ್ ಹಿಟ್ ಸಿನೆಮಾಗಳನ್ನ ಕೊಟ್ಟರು. ಅದರಲ್ಲೂ ಬಾಲಿವುಡ್ ನಟ ಅಜಯ್‌ ದೇವಗನ್‌ ಮತ್ತು ಟಬು ಜೋಡಿಯ ಸಿನೆಮಾ ಅಂದ್ರೆ ಯಾರೂ ಮಿಸ್ಸೇ ಮಾಡ್ತಿರಲಿಲ್ಲ. ಇನ್ನೂ 1994 ಬಂದ ‘ವಿಜಯ್‌ಪಥ್‌‘ ಚಿತ್ರ ನೋಡಿ ಇವರಿಬ್ಬರು ನಿಜ ಜೀವನದಲ್ಲೂ ಪರ್ಫೆಕ್ಟ್ ಜೋಡಿ ಆಗ್ಬಹುದು ಅಂತಾನೇ ಅಭಿಮಾನಿಗಳು ಅಂದುಕೊಂಡಿದ್ದರು.

ಇನ್ನೂ 1995ರಲ್ಲಿ ಹಕೀಕತ್, 1999 ರಲ್ಲಿ ತಕ್ಷಕ್, 2015 ದೃಶ್ಯಂ, ಗೋಲ್ಮಾಲ್ ಅಗೇನ್ ಮತ್ತು 2017 ದೇ ದೇ ಪ್ಯಾರ್ ದೇ ಅಂತಹ ಸಿನೆಮಾಗಳಲ್ಲಿ ಈ ಜೋಡಿಯನ್ನ ನೋಡಬಹುದಾಗಿದೆ. ಈಗ ಈ ಜೋಡಿ ಮತ್ತೆ ದೃಶ್ಯಂ 2 ನಲ್ಲೂ ನೋಡಬಹುದು.

ಇತ್ತಿಚೆಗೆ ಸುದ್ದಿ ಮಾಧ್ಯಮಕ್ಕೆ ನೀಡಿದ ಒಂದು ಸಂದರ್ಶನದಲ್ಲಿ, ಟಬು ತಾನು ಚಲನಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದ ದಿನಗಳ ಬಗ್ಗೆ ಮಾತನಾಡಿದ್ದಾರೆ.

“ನಾನು ಈ ಇಂಡ್ರಸ್ಟಿಗೆ ಬಂದ ಹೊಸದರಲ್ಲಿ ಅಜಯ್ ನನಗೆ ಒಳ್ಳೆಯ ಗೆಳೆಯರಾಗಿದ್ದರು. ನನ್ನ ಸೋದರ ಸಂಬಂಧಿ ಸಮೀರ್ ಆರ್ಯ ಮತ್ತು ಅಜಯ್ ನನ್ನ ಮೇಲೆ ಸದಾ ಒಂದು ಕಣ್ಣಿಡುತ್ತಿದ್ದರು. ನನ್ನ ಜೊತೆ ಯಾರಾದ್ರೂ ಹುಡುಗರು ಮಾತನಾಡಿದ್ರೆ ಅವರನ್ನ ಹೊಡೆಯುವುದಾಗಿ ಬೆದರಿಕೆ ಹಾಕುತ್ತಿದ್ದರು. ಇವರಿಬ್ಬರ ಭಯದಿಂದಲೇ ಯಾವ ಹುಡುಗರು ನನ್ನ ಜೊತೆ ಮಾತನಾಡುತ್ತಿರಲಿಲ್ಲ. ಇಂದು ನಾನು ಒಬ್ಬಂಟಿಯಾಗಿದ್ದೇನೆ ಅಂದ್ರೆ ಅದಕ್ಕೆ ಕಾರಣ, ಅಜಯ್. ಇವತ್ತು ನಾನು ಹೀಗೆ ಕಂಪ್ಲೇಂಟ್ ಮಾಡಿದ್ರೆ ಅದಕ್ಕೆ ಅಜಯ್ ಕ್ಷಮೆ ಕೇಳುತ್ತಾನೆ. ಮತ್ತು ಅವನು ಮಾಡಿದ್ದಕ್ಕೆ ವಿಷಾದಿಸುತ್ತಾನೆ ಎಂದು ನಾನು ಅಂದುಕೊಂಡಿದ್ದೆನೆ” ಅಂತ ನಗ್ತಾ ಹೇಳುತ್ತಾರೆ ಟಬು

ಅಜಯ್‌ ದೇವಗನ್‌ ಮತ್ತು ಟಬು ಇವರಿಬ್ಬರ ಸ್ನೇಹದ ಬಗ್ಗೆ ತುಂಬಾ ಗಾಸಿಪ್‌ಗಳು ಇದ್ದವು. ಆದರೂ ಇವರಿಬ್ಬರ ಸ್ನೇಹದ ನಡುವೆ ಅದ್ಯಾವುದೂ ಅಡ್ಡಿ ಬಂದೇ ಇಲ್ಲ. ಇಂದಿಗೂ ಇವರಿಬ್ಬರೂ ಒಳ್ಳೆಯ ಸ್ನೇಹಿತಾಗಿದ್ದಾರೆ. ಈಗ ಈ ಜೋಡಿಯನ್ನ ಇವರ ಮುಂಬರುವ ಚಿತ್ರ ʼದೃಶ್ಯಂ 2ʼ ನಲ್ಲಿ ನೋಡಬಹುದಾಗಿದೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...