20 ಸಾವಿರ ರನ್ ಬಾರಿಸಿ ದಾಖಲೆ ಬರೆದ ಮಿಥಾಲಿ ರಾಜ್, ’ರನ್ ಮಷಿನ್’ ಎಂದು ಹೊಗಳಿದ ನಟಿ ತಾಪ್ಸಿ 22-09-2021 11:41AM IST / No Comments / Posted In: Latest News, Live News, Sports ಮಂಗಳವಾರವು ಭಾರತದ ಮಹಿಳಾ ಕ್ರಿಕೆಟ್ ತಂಡಕ್ಕೆ ಬಹಳ ವಿಶೇಷ ದಿನವಾಗಿತ್ತು. ತಂಡದ ಕ್ಯಾಪ್ಟನ್ ಮಿಥಾಲಿ ರಾಜ್ ಅವರು ತಮ್ಮ ವೃತ್ತಿ ಜೀವನದಲ್ಲಿ 20 ಸಾವಿರ ರನ್ಗಳನ್ನು ಪೂರೈಸಿ ದಾಖಲೆ ಬರೆದರು. ಆಸ್ಪ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ತಮ್ಮ ಏಕದಿನ ಪಂದ್ಯಗಳಲ್ಲೇ 59ನೇ ಅರ್ಧಶತಕ ಬಾರಿಸಿದ್ದು ಮತ್ತೊಂದು ವಿಶೇಷವಾಗಿತ್ತು. ಈ ಮೂಲಕ ಭಾರತ ತಂಡದ ಮೊತ್ತವು 8 ವಿಕೆಟ್ ನಷ್ಟಕ್ಕೆ 225 ತಲುಪಿತ್ತು. ಮಕೇಯ್ನಲ್ಲಿನ ಈ ಪಂದ್ಯದಲ್ಲಿ ಮಿಥಾಲಿ ಅವರು 107 ಬಾಲ್ಗಳಿಗೆ 61 ರನ್ಗಳನ್ನು ಒಟ್ಟು ಹಾಕಿ ಗಮನ ಸೆಳೆದರು. ಈ ಸಾಧನೆಯನ್ನು ಗಮನಿಸುತ್ತಿದ್ದ ಬಾಲಿವುಡ್ನ ಖ್ಯಾತ ನಟಿ ತಾಪ್ಸಿ ಪನ್ನು ಅವರು ಟ್ವಿಟರ್ನಲ್ಲಿ ಮಿಥಾಲಿ ರಾಜ್ ಅವರಿಗೆ ವಿಶೇಷ ರೀತಿಯಲ್ಲಿ ಶುಭಾಶಯ ಕೋರಿದ್ದಾರೆ. ’ರನ್ ಮಷಿನ್’ ಎಂದು ಹಾಡಿಹೊಗಳಿದ್ದಾರೆ. ಶೀಘ್ರವೇ ತೆರೆ ಕಾಣಲಿರುವ ಮಿಥಾಲಿ ರಾಜ್ ಅವರ ಕ್ರಿಕೆಟ್ ಜೀವನದ ಏರಿಳಿತಗಳ ಕುರಿತಾದ ಸಿನಿಮಾ ’ಶಹಬ್ಬಾಸ್ ಮಿಥು’ನಲ್ಲಿ ಮಿಥಾಲಿ ಅವರ ಪಾತ್ರವನ್ನು ತಾಪ್ಸಿ ಮಾಡುತ್ತಿರುವುದು ಗಮನಾರ್ಹ ಸಂಗತಿ. ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಆಸ್ಪ್ರೇಲಿಯಾ ವಿರುದ್ಧ ಜಯಗಳಿಸಿದಲ್ಲಿ, ಸತತವಾಗಿ 25 ಪಂದ್ಯಗಳಲ್ಲಿ ಜಯ ಸಾಧಿಸಿದ ಕೀರ್ತಿಗೆ ಭಾರತದ ಮಹಿಳಾ ಕ್ರಿಕೆಟ್ ತಂಡ ಪಾತ್ರವಾಗಲಿದೆ. ಐಸಿಸಿ ಮಹಿಳಾ ಏಕದಿನ ರ್ಯಾಂಕಿಂಗ್ನಲ್ಲಿ ಮಿಥಾಲಿ ಸದ್ಯ ನಂ.1 ಸ್ಥಾನ ಅಲಂಕರಿಸಿದ್ದಾರೆ. ODI fifty No.59 for Mithali Raj 👏 📺 Watch the action on https://t.co/CPDKNx77KV (select regions)🧮Follow live https://t.co/pH8bEtSJHw | #AUSvIND pic.twitter.com/4vn4lS5o43 — ICC (@ICC) September 21, 2021 The run machine !!!! 👏🏾👏🏾👏🏾👏🏾 https://t.co/kF0t492uGy — taapsee pannu (@taapsee) September 21, 2021