alex Certify ತಾಪ್ಸಿ ಪನ್ನು ‘ದುಬಾರಾ’ ಪೈರಸಿಗೆ ಬಲಿ; ಆನ್​ ಲೈನ್ ಲ್ಲಿದೆ HD ಕ್ವಾಲಿಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಪ್ಸಿ ಪನ್ನು ‘ದುಬಾರಾ’ ಪೈರಸಿಗೆ ಬಲಿ; ಆನ್​ ಲೈನ್ ಲ್ಲಿದೆ HD ಕ್ವಾಲಿಟಿ

ಅನುರಾಗ್​ ಕಶ್ಯಪ್​ ನಿರ್ದೇಶನದ ಹೊಸ ಚಲನಚಿತ್ರ ‘ದುಬಾರಾ’ ಪೈರಸಿ ಹೊಡೆತಕ್ಕೆ ಸಿಲುಕಿ ಬೇಕಾಬಿಟ್ಟಿಯಾಗಿ ವೈರಲ್​ ಆಗಿದೆ. ತಾಪ್ಸಿ ಪನ್ನು ಮತ್ತು ಪಾವೈಲ್​ ಗುಲಾಟಿ ನಟಿಸಿರುವ ಚಿತ್ರ ಆನ್​ಲೈನ್​ನಲ್ಲಿ ಸೋರಿಕೆಯಾಗಿದೆ. ಮಿಸ್ಟರಿ-ಥ್ರಿಲ್ಲರ್​ ಆಗಿರುವ ಈ ಚಿತ್ರ ಥಿಯೇಟರ್​ಗಳಿಗೆ ಬಂದ ಒಂದು ದಿನದ ನಂತರ ಪೈರಸಿಗೆ ಸಿಲುಕಿದೆ.

ತಮಿಳುರಾಕರ್ಸ್​, ಮೂವಿರುಲೆಜ್​ ಮತ್ತು ಟೆಲಿಗ್ರಾಮ್​ನಂತಹ ವೇದಿಕೆಗಳಲ್ಲಿ ಇಡೀ ಚಲನಚಿತ್ರ ಲಭ್ಯವಿದ್ದು, ಚಿತ್ರವನ್ನು ಡೌನ್​ಲೋಡ್​ ಮಾಡಲಾಗುತ್ತಿದ್ದು, ವೇಗವಾಗಿ ಶೇರ್​ ಆಗುತ್ತಿದೆ. ಸಹಜವಾಗಿ ಇದು ಚಿತ್ರ ನಿರ್ಮಾಪಕರಿಗೆ ಆಘಾತ ತಂದಿದೆ

ದುಬಾರ ಚಿತ್ರಕಥೆಗಾಗಿ ಪ್ರಶಂಸಿಸಲ್ಪಟ್ಟಿದೆಯಾದರೂ ಪ್ರೇಕ್ಷಕರಲ್ಲಿ ಯಾವುದೇ ಕುತೂಹಲ ಉಂಟುಮಾಡುವಲ್ಲಿ ವಿಫಲವಾಗಿದೆ. ವರದಿಗಳ ಪ್ರಕಾರ, ಚಿತ್ರವು ತನ್ನ ಆರಂಭಿಕ ದಿನದಂದು ಅತ್ಯಂತ ಕಳಪೆ ಸಾಧನೆ ಮಾಡಿದ್ದು, ಚಿತ್ರಮಂದಿರಗಳಲ್ಲಿ ಕೇವಲ 2-3 ಪ್ರತಿಶತದಷ್ಟು ಆಕ್ಯುಪೆನ್ಸಿ ಇತ್ತು. ಇದೀಗ ಆನ್​ಲೈನ್​ನಲ್ಲಿ ಚಿತ್ರ ಲೀಕ್​ ಆಗಿರುವುದರಿಂದ ಗಳಿಕೆ ಮತ್ತಷ್ಟು ಕುಗ್ಗುವ ಸಾಧ್ಯತೆ ಇದೆ.

ಈ ಹಿಂದೆ ‘ವಿಕ್ರಾಂತ್​ ರೋಣಾ’, ‘ಜಗ್​ ಜಗ್​ ಜೀಯೋ’, ‘ಶೀ 2’, ‘ಭೂಲ್​ ಭುಲೈಯಾ 2’, ‘ಸರ್ಕಾರಿ ವಾರಿಪಾಟ’, ‘ಕೆಜಿಎಫ್​ 2’, ‘ಆರ್​ಆರ್​ಆರ್​’, ‘ಆಚಾರ್ಯ’, ‘ಸ್ಟ್ರೇಂಜರ್​ ಥಿಂಗ್ಸ್​ ಸೀಸನ್​ 4’ ಚಿತ್ರಗಳು ಪೈರಸಿ ಹೊಡೆತಕ್ಕೆ ಸಿಲುಕಿತ್ತು.

ಈ ನಡುವೆ ಬಾಲಿವುಡ್​ನಲ್ಲಿ ಬಾಯ್ಕಾಟ್​ ಗದ್ದಲ ಜೋರಾಗಿದ್ದು, ಚಿತ್ರದ ಇತ್ತೀಚಿನ ಪ್ರಚಾರ ಕಾರ್ಯಕ್ರಮಮೊಂದರಲ್ಲಿ, ತಾಪ್ಸಿ ಮತ್ತು ಅನುರಾಗ್​ ಕಶ್ಯಪ್​ ‘ದುಬಾರಾ’ವನ್ನು ಬಹಿಷ್ಕರಿಸುವಂತೆ ಜನರನ್ನು ತಮಾಷೆಯಾಗಿ ಕೇಳಿದ್ದರು.

“ದಯವಿಟ್ಟು ಎಲ್ಲರೂ ನಮ್ಮ ಚಿತ್ರವಾದ ‘ದುಬಾರಾ’ವನ್ನು ಬಹಿಷ್ಕರಿಸಿ. ನಾನು ಅಮೀರ್​ ಖಾನ್​ ಅವರ ‘ಲಾಲ್​ ಸಿಂಗ್​ ಚಡ್ಡಾ’ ಮತ್ತು ಅಕ್ಷಯ್​ ಕುಮಾರ್​ ಅವರ ‘ರಕ್ಷಾ ಬಂಧನ’ದಂತೆಯೇ ಅದೇ ಲೀಗ್​ನಲ್ಲಿ ಇರಲು ಬಯಸುತ್ತೇನೆ ಎಂದುಹೇಳಿಕೊಂಡಿದ್ದು. ಇದಕ್ಕೆ ಪೂರಕವಾಗಿ ಅನುರಾಗ್​ ಕೂಡ, “ಹೌದು ದಯವಿಟ್ಟು, ನಮ್ಮ ಚಿತ್ರವೂ ಬಹಿಷ್ಕಾರದ ಹ್ಯಾಶ್​ಟ್ಯಾಗ್​ನಲ್ಲಿ ಟ್ರೆಂಡ್​ ಆಗಬೇಕೆಂದು ನಾನು ಬಯಸುತ್ತೇನೆ. ಬಹಿಷ್ಕಾರಕ್ಕೆ ಕರೆ ನೀಡುವವರು ಥಿಯೇಟರ್​ಗಳಲ್ಲಿ ಚಲನಚಿತ್ರಗಳನ್ನು ನೋಡುವವರೇ ಎಂದು ನಾನು ತಿಳಿದುಕೊಳ್ಳಲು ಬಯಸುತ್ತೇನೆ” ಎಂದು ಕೆಣಕಿದ್ದರು.

ವರದಿಗಳ ಪ್ರಕಾರ 50 ಕೋಟಿ ಬಜೆಟ್​ನಲ್ಲಿ ತಯಾರಾದ ‘ದುಬಾರ’ ಮೊದಲ ದಿನ 72 ಲಕ್ಷ ರೂ.ಗಳನ್ನಷ್ಟೇ ಗಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...