alex Certify ಸಿನಿಮಾ ನಿರ್ಮಾಣಕ್ಕೆ ಬರೋಬ್ಬರಿ 1000 ಕೋಟಿ ರೂ. ಹೂಡಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿನಿಮಾ ನಿರ್ಮಾಣಕ್ಕೆ ಬರೋಬ್ಬರಿ 1000 ಕೋಟಿ ರೂ. ಹೂಡಿಕೆ

ಬಾಲಿವುಡ್ ಸಿನಿಮಾ ಪ್ರೊಡಕ್ಷನ್​ ಹೌಸ್​ ಟಿ ಸೀರಿಸ್​ ಹಾಗೂ ರಿಲಾಯನ್ಸ್​ ಎಂಟರ್​ಟೈನ್​ಮೆಂಟ್​​ ಒಂದಾಗಿ 10ಕ್ಕೂ ಅಧಿಕ ಸಿನಿಮಾಗಳನ್ನು ನಿರ್ಮಾಣ ಮಾಡಲು ಮುಂದಾಗಿವೆ.

ಇದರಲ್ಲಿ ಭಾರೀ ದೊಡ್ಡ, ಮಧ್ಯಮ ಹಾಗೂ ಸಣ್ಣ ಬಜೆಟ್​​ನ ಸಿನಿಮಾಗಳು ಇರಲಿದೆ. ಅಲ್ಲದೇ ಇದು ಭಾರತದ ಸಿನಿಮಾದ ಇತಿಹಾಸದಲ್ಲಿಯೇ ಅತಿದೊಡ್ಡ ಮಟ್ಟದ ಸಹಭಾಗಿತ್ವವಾಗಿದೆ.

ಎರಡು ದೊಡ್ಡ ಸಂಸ್ಥೆಗಳು ಒಂದಾಗಿ 10 ಸಿನಿಮಾಗಳ ನಿರ್ಮಾಣಕ್ಕೆ ಸರಿ ಸುಮಾರು 1000 ಕೋಟಿ ರೂಪಾಯಿ ಹೂಡಿಕೆ ಮಾಡಲಿವೆ. ಈ ಸಹಭಾಗಿತ್ವವವು ವಿವಿಧ ಪ್ರಕಾರ ಸಿನಿಮಾಗಳು, ಹಾಡುಗಳು, ಸಂಗೀತ, ಹೊಸ ಪ್ರತಿಭೆ ಹೀಗೆ ಸಿನಿಮಾ ಇಂಡಸ್ಟ್ರಿಗೆ ಅನೇಕ ಕೊಡುಗೆಗಳನ್ನು ನೀಡಲಿದೆ ಎಂದು ಅಂದಾಜಿಸಲಾಗಿದೆ.

ಭೂಷಣ್​ ಕುಮಾರ್​ರ ಟಿ ಸಿರೀಟ್​ ಹಾಗೂ ರಿಲಾಯನ್ಸ್​​ ಎಂಟರ್​ಟೈನ್​ಮೆಂಟ್​​ 100ಕ್ಕೂ ಅಧಿಕ ಸಿನಿಮಾಗಳ ಸಂಗೀತ ಮಾರುಕಟ್ಟೆಗೆ ಸಹಭಾಗಿತ್ವ ಹೊಂದಿದೆ. ಆದರೆ ಇದೇ ಮೊದಲ ಬಾರಿಗೆ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಲಿವೆ. ಸಾಕಷ್ಟು ಸಿನಿಮಾಗಳು ವಿವಿಧ ಹಂತಗಳಲ್ಲಿ ಇದೆ ಎನ್ನಲಾಗಿದೆ.

2 ದೈತ್ಯ ಪ್ರೊಡಕ್ಷನ್​ ಹೌಸ್​ಗಳು ಒಂದಾಗಿ ನಿರ್ಮಿಸುತ್ತಿರುವ 10 ಸಿನಿಮಾಗಳ ಪೈಕಿ ಕನಿಷ್ಟ ಮೂರು ಸಿನಿಮಾ ದೊಡ್ಡ ಬಜೆಟ್​ನಲ್ಲಿ ನಿರ್ಮಾಣವಾಗಲಿದೆ. ಮೂರು ಸಿನಿಮಾಗಳು ಮಲ್ಟಿ ಸ್ಟಾರ್​ ಚಿತ್ರಗಳಾಗಿರಲಿವೆ.

ಮುಂದಿನ ದಿನಗಳಲ್ಲಿ ಬರುವ ಸಿನಿಮಾಗಳಲ್ಲಿ ಒಂದು ತಮಿಳು ಬ್ಲಾಕ್​ ಬಸ್ಟರ್​ ಚಿತ್ರ ಹಿಂದಿಗೆ ರಿಮೇಕ್​ ಆಗಲಿದೆ. ಆ್ಯಕ್ಷನ್​ ಥ್ರಿಲ್ಲರ್​ ಹಾಗೂ ಐತಿಹಾಸಿಕ ಸಿನಿಮಾ, ಕೋರ್ಟ್​ ರೂಮ್ ಡ್ರಾಮಾ, ಹಾಸ್ಯ, ರೋಮ್ಯಾಟಿಂಕ್​, ನೈಜ ಘಟನೆ ಆಧಾರಿತ ಹಾರರ್ ಸಿನಿಮಾ​ ಹೀಗೆ ನಾನಾ ಕಥಾಹಂದರಗಳನ್ನು ಹೊಂದಿರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...