alex Certify ಟಿ – ಮೊಬೈಲ್​ ಮೇಲೆ ಸೈಬರ್​ ದಾಳಿ : 7.8 ಮಿಲಿಯನ್​ ಗ್ರಾಹಕರ ಮಾಹಿತಿ ಸೋರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿ – ಮೊಬೈಲ್​ ಮೇಲೆ ಸೈಬರ್​ ದಾಳಿ : 7.8 ಮಿಲಿಯನ್​ ಗ್ರಾಹಕರ ಮಾಹಿತಿ ಸೋರಿಕೆ

ಟಿ ಮೊಬೈಲ್​​​ ತನ್ನ ಮೇಲೆ ನಡೆದ ಸೈಬರ್​ ದಾಳಿಯ ವಿಚಾರವಾಗಿ ನಡೆಯುತ್ತಿರುವ ತನಿಖೆಯ ಬಗ್ಗೆ ಮಾಹಿತಿ ನೀಡಿದೆ. ಈ ಸೈಬರ್​ ದಾಳಿಯಲ್ಲಿ ಸರಿ ಸುಮಾರಿ 7.8 ಮಿಲಿಯನ್​ ಗ್ರಾಹಕರ ವೈಯಕ್ತಿಕ ದಾಖಲೆಗಳನ್ನು ಸೋರಿಕೆ ಮಾಡಲಾಗಿದೆ ಎಂದು ಹೇಳಿದೆ.

ಕಂಪನಿಯ ಮೇಲೆ ಸೈಬರ್​ ದಾಳಿ ನಡೆಸಲಾಗಿದೆ ಎಂಬ ವಿಚಾರವನ್ನು ಕಳೆದ ವಾರ ಕಂಪನಿಯು ಬಹಿರಂಗಪಡಿಸಿದೆ. ಆನ್​ಲೈನ್​ ಫೋರಂ ತನ್ನ ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ ಎಂದು ಹೇಳಿಕೊಂಡ ನಂತರ ಟಿ ಮೊಬೈಲ್​ ಈ ವಿಚಾರವನ್ನು ಹೇಳಿದೆ.

ಸುಮಾರು 8,50,000 ಪ್ರಿಪೇಯ್ಡ್​​ ಗ್ರಾಹಕರು ಹಾಗೂ ಹಿಂದಿನ ಗ್ರಾಹಕರ 40 ಮಿಲಿಯನ್​ಗೂ ಅಧಿಕ ದಾಖಲೆಗಳನ್ನು ಕದಿಯಲಾಗಿದೆ ಎಂದು ಟಿ ಮೊಬೈಲ್​ ಹೇಳಿದೆ. ಸೋರಿಕೆಯಾದ ದಾಖಲೆಗಳಲ್ಲಿ ಗ್ರಾಹಕರ ಹೆಸರು, ಹುಟ್ಟಿದ ದಿನಾಂಕ, ಸೋಶಿಯಲ್​ ಸೆಕ್ಯೂರಿಟಿ ಸಂಖ್ಯೆ ಹಾಗೂ ಚಾಲನಾ ಪರವಾನಿಗೆ ಮಾಹಿತಿಯನ್ನು ಒಳಗೊಂಡಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...