ಟಿ ಮೊಬೈಲ್ ತನ್ನ ಮೇಲೆ ನಡೆದ ಸೈಬರ್ ದಾಳಿಯ ವಿಚಾರವಾಗಿ ನಡೆಯುತ್ತಿರುವ ತನಿಖೆಯ ಬಗ್ಗೆ ಮಾಹಿತಿ ನೀಡಿದೆ. ಈ ಸೈಬರ್ ದಾಳಿಯಲ್ಲಿ ಸರಿ ಸುಮಾರಿ 7.8 ಮಿಲಿಯನ್ ಗ್ರಾಹಕರ ವೈಯಕ್ತಿಕ ದಾಖಲೆಗಳನ್ನು ಸೋರಿಕೆ ಮಾಡಲಾಗಿದೆ ಎಂದು ಹೇಳಿದೆ.
ಕಂಪನಿಯ ಮೇಲೆ ಸೈಬರ್ ದಾಳಿ ನಡೆಸಲಾಗಿದೆ ಎಂಬ ವಿಚಾರವನ್ನು ಕಳೆದ ವಾರ ಕಂಪನಿಯು ಬಹಿರಂಗಪಡಿಸಿದೆ. ಆನ್ಲೈನ್ ಫೋರಂ ತನ್ನ ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ ಎಂದು ಹೇಳಿಕೊಂಡ ನಂತರ ಟಿ ಮೊಬೈಲ್ ಈ ವಿಚಾರವನ್ನು ಹೇಳಿದೆ.
ಸುಮಾರು 8,50,000 ಪ್ರಿಪೇಯ್ಡ್ ಗ್ರಾಹಕರು ಹಾಗೂ ಹಿಂದಿನ ಗ್ರಾಹಕರ 40 ಮಿಲಿಯನ್ಗೂ ಅಧಿಕ ದಾಖಲೆಗಳನ್ನು ಕದಿಯಲಾಗಿದೆ ಎಂದು ಟಿ ಮೊಬೈಲ್ ಹೇಳಿದೆ. ಸೋರಿಕೆಯಾದ ದಾಖಲೆಗಳಲ್ಲಿ ಗ್ರಾಹಕರ ಹೆಸರು, ಹುಟ್ಟಿದ ದಿನಾಂಕ, ಸೋಶಿಯಲ್ ಸೆಕ್ಯೂರಿಟಿ ಸಂಖ್ಯೆ ಹಾಗೂ ಚಾಲನಾ ಪರವಾನಿಗೆ ಮಾಹಿತಿಯನ್ನು ಒಳಗೊಂಡಿದೆ.