ಕೊರೊನಾ ಮಹಾಮಾರಿಯ ಬೆನ್ನಲ್ಲೇ ಐರ್ಲೆಂಡ್ಗೆ ಮತ್ತೊಂದು ಶಾಕ್ ಎದುರಾಗಿದೆ. ಐರ್ಲೆಂಡ್ನಲ್ಲಿ ಸಿಫಿಲಿಸ್ ಕಾಯಿಲೆಯು ಸಾಂಕ್ರಾಮಿಕ ರೋಗದಂತೆ ಹರಡುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
BIG BREAKING: ರಾಜ್ಯದಲ್ಲಿಂದು ಕೊರೋನಾದಿಂದ 45 ಮಂದಿ ಸಾವು, ಜಿಲ್ಲೆಗಳಲ್ಲಿ ಸೋಂಕು ಇಳಿಕೆ- ಇಲ್ಲಿದೆ ಮಾಹಿತಿ
ಸಿಫಿಲಿಸ್ ಎನ್ನೋದು ಒಂದು ಬ್ಯಾಕ್ಟೀರಿಯಾ ಸಂಬಂಧ ಸೋಂಕಾಗಿದೆ. ಲೈಂಗಿಕ ಕ್ರಿಯೆಯ ವೇಳೆ ಟ್ರೆಫೊನೆಮಾ ಪ್ಯಾಲಿಡಮ್ ಎಂಬ ಬ್ಯಾಕ್ಟೀರಿಯಾದ ಮೂಲಕ ಈ ಸೋಂಕು ಹರಡುತ್ತದೆ. ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದಿದ ಪುರುಷರಲ್ಲಿ ಈ ಸೋಂಕು ಹೆಚ್ಚಾಗಿ ಕಂಡು ಬಂದಿದೆ ಎಂದು ಸೋಂಕು ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕೇಂದ್ರ ಮಾಹಿತಿ ನೀಡಿದೆ. ಜೂನ್ 21ರಿಂದ ಈ ಸೋಂಕಿನ ಬಗ್ಗೆ ಅಧ್ಯಯನವನ್ನ ನಡೆಸಲಾಗುತ್ತಿದೆ.