alex Certify ಗ್ರಾಹಕರೇ ಗಮನಿಸಿ: ಜುಲೈ 1ರಿಂದ ಬದಲಾಗಲಿದೆ ಈ ಬ್ಯಾಂಕಿನ ಐಎಫ್‌ಎಸ್‌ಸಿ ಕೋಡ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರೇ ಗಮನಿಸಿ: ಜುಲೈ 1ರಿಂದ ಬದಲಾಗಲಿದೆ ಈ ಬ್ಯಾಂಕಿನ ಐಎಫ್‌ಎಸ್‌ಸಿ ಕೋಡ್‌

ಜುಲೈ 1ರಿಂದ ಸಿಂಡಿಕೇಟ್ ಬ್ಯಾಂಕ್‌ನ ಎಲ್ಲಾ ಶಾಖೆಗಳ ಐಎಫ್‌ಎಸ್‌ಸಿ ಕೋಡ್‌ಗಳು ಬದಲಾಗಲಿವೆ. ಏಪ್ರಿಲ್ 1, 2020ರಿಂದ ಕೆನರಾ ಬ್ಯಾಂಕ್‌ನಲ್ಲಿ ವಿಲೀನಗೊಂಡಿರುವ ಸಿಂಡಿಕೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಅನಾನುಕೂಲವಾಗದಿರಲೆಂದು ಕಳೆದೊಂದು ವರ್ಷದಿಂದ ಬಫರ್‌ ಅವಧಿಯನ್ನು ನಿಭಾಯಿಸಿಕೊಂಡು ಹಳೆಯ ಐಎಫ್‌ಎಸ್‌ಸಿ ಕೋಡ್‌ಗಳನ್ನೇ ಮುಂದುವರೆಸಿತ್ತು.

ಆದರೆ ಸಿಂಡಿಕೇಟ್ ಬ್ಯಾಂಕ್‌ನ ಹಳೆಯ ಐಎಫ್‌ಎಸ್‌ಸಿ ಕೋಡ್‌ಗಳು ಜೂನ್ 30ರವರೆಗೆ ಮಾತ್ರ ಕೆಲಸ ಮಾಡಲಿವೆ. ಆದ್ದರಿಂದ ಹೊಸ ಐಎಸ್‌ಎಫ್‌ಸಿ ಹಾಗೂ ಎಂಐಸಿಆರ್‌ ಕೋಡ್‌ಗಳನ್ನು ಗ್ರಾಹಕರು ಕಂಡುಕೊಳ್ಳಬೇಕಿದೆ.

ಕೆನರಾ ಬ್ಯಾಂಕ್‌ನ ಪೋರ್ಟಲ್ http://www.canarabank.com/ಗೆ ಭೇಟಿ ಕೊಟ್ಟು, ಅಲ್ಲಿ ಸಿಂಡಿಕೇಟ್ ಬ್ಯಾಂಕ್‌ ಗ್ರಾಹಕರು ಬದಲಾದ ಐಎಫ್‌ಎಸ್‌ಸಿ ಕೋಡ್‌ಗಳ ವಿವರಗಳನ್ನು ಪಡೆಯಬಹುದಾಗಿದೆ.

ಪೋರ್ಟಲ್‌ನಲ್ಲಿ ‘What’s New’ ಆಯ್ಕೆಗೆ ಹೋಗಿ, ಅಲ್ಲಿ ‘KIND ATTN eSYNDIATE CUSTOMERS: KNOW YOUR NEW IFSC’ ಕ್ಲಿಕ್ ಮಾಡಿ ನಿಮ್ಮ ಐಎಫ್‌ಎಸ್‌ಸಿ ಕೋಡ್ ಪಡೆಯಬಹುದಾಗಿದೆ. ಅಥವಾ ಕೆನರಾ ಬ್ಯಾಂಕ್‌ನ ಗ್ರಾಹಕ ಸೇವಾ ಸಂಖ್ಯೆ 18004250018ಗೆ ಕರೆ ಮಾಡಿ ತಿಳಿದುಕೊಳ್ಳಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...