alex Certify ನೋವಿಲ್ಲದೆ ಸಾಯುವ ಸೂಸೈಡ್ ಪಾಡ್‌ ಕಾನೂನುಬದ್ಧಗೊಳಿಸಿದ ಸ್ವಿಜ಼ರ್ಲೆಂಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋವಿಲ್ಲದೆ ಸಾಯುವ ಸೂಸೈಡ್ ಪಾಡ್‌ ಕಾನೂನುಬದ್ಧಗೊಳಿಸಿದ ಸ್ವಿಜ಼ರ್ಲೆಂಡ್

ನೋವೇ ಇಲ್ಲದಂತೆ ಒಂದೇ ನಿಮಿಷದಲ್ಲಿ ಸಾಯಲು ಅನುವಾಗುವ ಆತ್ಮಹತ್ಯಾ ಪಾಡ್ ಒಂದರ ಬಳಕೆಗೆ ಸ್ವಿಜ಼ರ್ಲೆಂಡ್ ಶಾಸನಾತ್ಮಕ ಅನುಮತಿ ನೀಡಿದೆ.

ಸೂಸೈಡ್ ಪಾಡ್‌ಗಳು ಎಂದು ಕರೆಯಲಾಗುವ ’ಸ್ಯಾಕ್ರೋ’ ಯಂತ್ರಗಳು 3ಡಿ ಮುದ್ರಿತ್‌ ಕ್ಯಾಪ್ಸೂಲ್‌ಗಳಾಗಿದ್ದು, ತಮ್ಮೊಳಗೆ ನೈಟ್ರೋಜನ್‌ ತುಂಬಿಕೊಂಡು ಆಮ್ಲಜನಕದ ಪ್ರಮಾಣದ ತಗ್ಗಿಸಿ ಒಳಗಿರುವ ವ್ಯಕ್ತಿಯನ್ನು ತಣ್ಣಗೆ ಜೀವ ಬಿಡಲು ನೆರವಾಗುತ್ತದೆ.

ಹಾವುಗಳನ್ನು ಓಡಿಸಲು ಹೋಗಿ ಕೋಟ್ಯಾಂತರ ರೂ. ಮೌಲ್ಯದ ಮನೆಗೆ ಬೆಂಕಿ ಇಟ್ಟ ಭೂಪ…!

ಸ್ವಿಸ್ ಇನ್ಫೋ ವರದಿಯ ಪ್ರಕಾರ, ಶವಪೆಟ್ಟಿಗೆಯಂತೆ ಕಾಣುವ ಸ್ಯಾಕ್ರೋ ಕ್ಯಾಪ್ಸೂಲ್‌ನ್ನು ಸ್ವಿಜ಼ರ್ಲೆಂಡ್‌ನಲ್ಲಿ 2022ರಿಂದ ಬಳಕೆಗೆ ಸಿದ್ಧಪಡಿಸಲಾಗುತ್ತಿದೆ. ಈ ಯಂತ್ರವನ್ನು ನೆದರ್ಲೆಂಡ್ಸ್‌ನಲ್ಲಿ ವೈದ್ಯ ಫಿಲಿಪ್ ನಿಟ್‌ಶ್ಕಿ ಅವರು ಅಭಿವೃದ್ಧಿಪಡಿಸಿದ್ದಾರೆ. ದ್ರವ ರೂಪದ ಸೋಡಿಯಂ ಪೆಂಟೋಬಾರ್ಬಿಟಲ್‌ ಅನ್ನು ಕರಗಿಸಿಕೊಳ್ಳುವ ಆತ್ಮಹತ್ಯಾ ಯಂತ್ರಗಳು ಯಾವುದೇ ನಿಯಂತ್ರಿತ ವಸ್ತುಗಳಿಲ್ಲದೆ ಶಾಂತಿಯಿಂದ ಸಾಯಲು ಅನುವು ಮಾಡಿಕೊಡುತ್ತವೆ.

ಒಮ್ಮೆ ಸಕ್ರಿಯವಾದ ಕೂಡಲೇ ಕ್ಯಾಪ್ಸೂಲ್ ಒಳಗೆ ನೈಟ್ರೋಜನ್ ನುಗ್ಗಿ ಆಮ್ಲಜನಕದ ಪ್ರಮಾಣವನ್ನು ವ್ಯಾಪಕವಾಗಿ ತಗ್ಗಿಸಿ, ಒಳಗಿರುವ ವ್ಯಕ್ತಿ ಪ್ರಜ್ಞಾಹೀನನಾಗಿ ಹಾಗೇ ಯಾವುದೇ ನೋವಿಲ್ಲದೇ ಸಾಯುತ್ತಾನೆ. ಇಡೀ ಪ್ರಕ್ರಿಯೆಯು ಒಂದು ನಿಮಿಷದಲ್ಲಿ ನಡೆದು ಹೋಗುತ್ತದೆ ಎಂದು ಫಿಲಿಪ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...