alex Certify ಮಹಿಳೆಗೆ ಏಕಕಾಲದಲ್ಲಿ ಮೂರು ಬಾರಿ ಡಿಕ್ಕಿ ಹೊಡೆದ ಸ್ವಂತ ಕಾರು; ಗಂಭೀರ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಗೆ ಏಕಕಾಲದಲ್ಲಿ ಮೂರು ಬಾರಿ ಡಿಕ್ಕಿ ಹೊಡೆದ ಸ್ವಂತ ಕಾರು; ಗಂಭೀರ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

ವಿಲಕ್ಷಣ ಪ್ರಕರಣ ಒಂದರಲ್ಲಿ ಮಹಿಳೆಯೊಬ್ಬರಿಗೆ ಆಕೆಯದ್ದೇ ಕಾರು ಏಕಕಾಲದಲ್ಲಿ ಮೂರು ಬಾರಿ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಆಕೆ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆ ಸ್ವಿಜರ್ಲ್ಯಾಂಡ್ ನ ಸೈಂಟ್ ಗ್ಯಾಲೆನ್ ನಲ್ಲಿ ನಡೆದಿದ್ದು, ಹೊರಗಡೆ ಹೋಗಿದ್ದ 45 ವರ್ಷದ ಈ ಮಹಿಳೆ ಕಾರನ್ನು ಆನ್ ಮಾಡಿಯೇ ಕೆಳಗೆ ಇಳಿದಿದ್ದಾಳೆ.

ಈ ವೇಳೆ ಡಿಕ್ಕಿಯಲ್ಲಿದ್ದ ವಸ್ತು ತೆಗೆದುಕೊಳ್ಳಲು ಮುಂದಾಗಿದ್ದು, ಏಕಾಏಕಿ ಹಿಂದೆ ಚಲಿಸಲು ಆರಂಭಿಸಿದ ಕಾರು ಮೊದಲ ಬಾರಿಗೆ ಆಕೆಗೆ ಡಿಕ್ಕಿ ಹೊಡೆದಿದೆ. ಇದರಿಂದ ಆಕೆ ಕೆಳಕ್ಕೆ ಬಿದ್ದಿದ್ದು, ಹಿಂದೆ ಹೋಗಿದ್ದ ಕಾರು ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದು ಮುಂದಿನಿಂದ ಮತ್ತೊಂದು ಬಾರಿ ಮಹಿಳೆಗೆ ಗುದ್ದಿದೆ.

ಇಷ್ಟು ಸಾಲದೆಂಬಂತೆ ಮುಂದೆ ಚಲಿಸಿದ ಕಾರು ಗೋಡೆಗೆ ಡಿಕ್ಕಿ ಹೊಡೆದು, ಮತ್ತೊಮ್ಮೆ ವಾಪಸ್ ಬಂದು ಮಹಿಳೆಗೆ ಡಿಕ್ಕಿ ಹೊಡೆದಿದೆ. ಹೀಗೆ ಒಂದೇ ಬಾರಿ ಮೂರು ಅಪಘಾತಗಳಿಗೆ ತುತ್ತಾದ ಮಹಿಳೆ ಸ್ಥಿತಿ ಈಗ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...