alex Certify ಭಾರೀ ಮಳೆ ನಡುವೆ ಆರ್ಡರ್​ ಡ್ರಾಪ್​ ಮಾಡಲು ಕುದುರೆ ಏರಿಬಂದ ಸ್ವಿಗ್ಗಿ ಡೆಲಿವರಿ ಬಾಯ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರೀ ಮಳೆ ನಡುವೆ ಆರ್ಡರ್​ ಡ್ರಾಪ್​ ಮಾಡಲು ಕುದುರೆ ಏರಿಬಂದ ಸ್ವಿಗ್ಗಿ ಡೆಲಿವರಿ ಬಾಯ್​

ಮುಂಬೈನಲ್ಲಿ ಮುಂಗಾರು ಚುರುಕಾಗಿದ್ದು, ಭಾರೀ ಮಳೆಯಾಗುತ್ತಿದೆ. ಈ ಮಳೆಯ ನಡುವೆ ಸ್ವಿಗ್ಗಿ ಡೆಲಿವರಿ ಏಜೆಂಟ್​ ಆರ್ಡರ್​ ಡೆಲಿವರಿ ಮಾಡಲು ಕುದುರೆಯನ್ನು ಬಳಸಿರುವುದು ಸಾಮಾಜಿಕ ಮಾಧ್ಯಮದಲ್ಲಿ ಪ್ರಶಂಸೆಗೆ ಕಾರಣವಾಗಿದೆ.

ನಗರದಲ್ಲಿ ನಿರಂತರ ಮಳೆಯಿಂದಾಗಿ ರಸ್ತೆಗಳು ನೀರಿನಿಂದ ಜಲಾವೃತಗೊಂಡಿದ್ದರಿಂದ ಡೆಲಿವರಿ ಬಾಯ್​ ಆಹಾರ ಪೊಟ್ಟಣ ತಲುಪಿಸಲು ಕುದುರೆಯ ಮೇಲೆ ಪ್ರಯಾಣಿಸುತ್ತಿರುವುದನ್ನು ವಿಡಿಯೊ ಚಿತ್ರೀಕರಿಸಲಾಗಿದೆ. ಹಲವಾರು ಸಾಮಾಜಿಕ ಮಾಧ್ಯಮ ಪ್ಲಾಟ್​ಫಾರ್ಮ್‌ಗಳಲ್ಲಿ ಆ ಸಣ್ಣ ವಿಡಿಯೋ ಕ್ಲಿಪ್​ ವೈರಲ್​ ಆಗಿದೆ.

ಮಗನಿಗೆ ಗಣಿತದಲ್ಲಿ 100 ಕ್ಕೆ 6 ಅಂಕ, ಕಣ್ಣೀರಿಟ್ಟ ತಂದೆ….!

ಜಾಲತಾಣ ಬಳಕೆದಾರರು ಈ ಡೆಲಿವರಿ ಬಾಯ್​ನ ಕೆಲಸದಲ್ಲಿನ ಸಮರ್ಪಣೆ ಮನೋಭಾವವನ್ನು ಪ್ರಶಂಸಿಸಿದ್ದಾರೆ. ಹಾಸ್ಯಮಯ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.

ಈ ವಾರದ ಆರಂಭದಲ್ಲಿ ಮುಂಬೈನಲ್ಲಿ ಭಾರೀ ಮಳೆ ಅಪ್ಪಳಿಸಿತು, ಹವಾಮಾನ ಇಲಾಖೆ ನಗರದಲ್ಲಿ ಆರೆಂಜ್​ ಅಲರ್ಟ್ ನೀಡಿದೆ. ನಿರಂತರ ಮಳೆಯ ನಡುವೆ, ಕಲ್ಬಾದೇವಿ ಮತ್ತು ಸಿಯಾನ್​ ಪ್ರದೇಶಗಳಲ್ಲಿ ಎರಡು ಕಟ್ಟಡಗಳು ಕುಸಿದ ಘಟನೆಗಳು ವರದಿಯಾಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...