
ಮುಂಬೈನಲ್ಲಿ ಮುಂಗಾರು ಚುರುಕಾಗಿದ್ದು, ಭಾರೀ ಮಳೆಯಾಗುತ್ತಿದೆ. ಈ ಮಳೆಯ ನಡುವೆ ಸ್ವಿಗ್ಗಿ ಡೆಲಿವರಿ ಏಜೆಂಟ್ ಆರ್ಡರ್ ಡೆಲಿವರಿ ಮಾಡಲು ಕುದುರೆಯನ್ನು ಬಳಸಿರುವುದು ಸಾಮಾಜಿಕ ಮಾಧ್ಯಮದಲ್ಲಿ ಪ್ರಶಂಸೆಗೆ ಕಾರಣವಾಗಿದೆ.
ನಗರದಲ್ಲಿ ನಿರಂತರ ಮಳೆಯಿಂದಾಗಿ ರಸ್ತೆಗಳು ನೀರಿನಿಂದ ಜಲಾವೃತಗೊಂಡಿದ್ದರಿಂದ ಡೆಲಿವರಿ ಬಾಯ್ ಆಹಾರ ಪೊಟ್ಟಣ ತಲುಪಿಸಲು ಕುದುರೆಯ ಮೇಲೆ ಪ್ರಯಾಣಿಸುತ್ತಿರುವುದನ್ನು ವಿಡಿಯೊ ಚಿತ್ರೀಕರಿಸಲಾಗಿದೆ. ಹಲವಾರು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ಆ ಸಣ್ಣ ವಿಡಿಯೋ ಕ್ಲಿಪ್ ವೈರಲ್ ಆಗಿದೆ.
ಮಗನಿಗೆ ಗಣಿತದಲ್ಲಿ 100 ಕ್ಕೆ 6 ಅಂಕ, ಕಣ್ಣೀರಿಟ್ಟ ತಂದೆ….!
ಜಾಲತಾಣ ಬಳಕೆದಾರರು ಈ ಡೆಲಿವರಿ ಬಾಯ್ನ ಕೆಲಸದಲ್ಲಿನ ಸಮರ್ಪಣೆ ಮನೋಭಾವವನ್ನು ಪ್ರಶಂಸಿಸಿದ್ದಾರೆ. ಹಾಸ್ಯಮಯ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.
ಈ ವಾರದ ಆರಂಭದಲ್ಲಿ ಮುಂಬೈನಲ್ಲಿ ಭಾರೀ ಮಳೆ ಅಪ್ಪಳಿಸಿತು, ಹವಾಮಾನ ಇಲಾಖೆ ನಗರದಲ್ಲಿ ಆರೆಂಜ್ ಅಲರ್ಟ್ ನೀಡಿದೆ. ನಿರಂತರ ಮಳೆಯ ನಡುವೆ, ಕಲ್ಬಾದೇವಿ ಮತ್ತು ಸಿಯಾನ್ ಪ್ರದೇಶಗಳಲ್ಲಿ ಎರಡು ಕಟ್ಟಡಗಳು ಕುಸಿದ ಘಟನೆಗಳು ವರದಿಯಾಗಿವೆ.
https://www.youtube.com/watch?time_continue=4&v=H54-MYgEiTc&feature=emb_logo