alex Certify ಬಾಲಕನಿಗೆ ಸಿಕ್ತು 100 ವರ್ಷಗಳ ಹಿಂದಿನ ಹಳೆ ಲವ್‌ ಲೆಟರ್‌…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಕನಿಗೆ ಸಿಕ್ತು 100 ವರ್ಷಗಳ ಹಿಂದಿನ ಹಳೆ ಲವ್‌ ಲೆಟರ್‌…!

14 ವರ್ಷದ ಹುಡುಗನೊಬ್ಬ ತನ್ನ ಕೋಣೆಯನ್ನು ಸ್ವಚ್ಛಗೊಳಿಸಿಕೊಳ್ಳುವಾಗ ಟಿವಿಯು ಏಕಾಏಕಿ ನೆಲದ ಮೇಲೆ ಬಿದ್ದಿದೆ. ಟೈಲ್ಸ್‌ಗಳು ಕಿತ್ತುಹೋಗಿ ನೆಲವು ಬಿರುಕು ಬಿಟ್ಟಿದೆ. ತಾಯಿಯಿಂದ ಬೈಗುಳ ತಿಂದ ಬಾಲಕ, ಟೈಲ್ಸ್‌ ಸರಿ ಮಾಡಲು ಶುರು ಮಾಡಿದಾಗ ಆತನಿಗೆ ಒಂದು ಕಾಗದದ ತುಂಡು ಕಂಡುಬಂದಿದೆ. ತಾಯಿ ಕೂಡ ಅದನ್ನು ಎತ್ತಿಕೊಂಡಾಗ ಅದೊಂದು ಮಡಚಿದ ಪತ್ರವೆಂದು ಅರಿವಾಗಿದೆ. ಪತ್ರ ಓದಿದ ಮೇಲೆ ತಿಳಿದಿದ್ದೇನೆಂದರೆ, ಅದು 100 ವರ್ಷಗಳ ಮುನ್ನ ವಿವಾಹಯೇತರ ಸಂಬಂಧ ಹೊಂದಿದ್ದ ಮಹಿಳೆಗೆ ಆಕೆಯ ಪ್ರೇಮಿಯೊಬ್ಬ ಬರೆದ ಲವ್‌ ಲೆಟರ್‌ ಎಂದು.

ಬ್ರಿಟನ್‌ನಲ್ಲಿ ನಡೆದ ಈ ಘಟನೆ ಹಾಗೂ ಲವ್‌ ಲೆಟರ್‌ನ ಫೋಟೊ ಬಗ್ಗೆ ಫೇಸ್‌ಬುಕ್‌ನಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಪತ್ರದಲ್ಲಿ, ’’ಪ್ರಿಯೆ, ಪ್ರತಿದಿನ ಬೆಳಗ್ಗೆ ಬಂದು ನಿನ್ನನ್ನು ನೋಡಲು ನಾನು ತುದಿಗಾಲಲ್ಲಿ ನಿಂತಿರುತ್ತೇನೆ. ನೀನೊಬ್ಬ ವಿವಾಹ ಆಗಿರುವ ಮಹಿಳೆ, ಹಾಗಾಗಿ ನಮ್ಮ ನಡುವಿನ ಸಂಬಂಧ ಅತ್ಯಂತ ಗೌಪ್ಯವಾಗಿರಲಿ. ಯಾರೊಂದಿಗೂ ಈ ಬಗ್ಗೆ ಚರ್ಚಿಸಬೇಡ. ಬಹಳ ಸಮಸ್ಯೆಗಳು ಎದುರಾಗಬಹುದು’’ ಎಂದು ಬರೆಯಲಾಗಿದೆ. ಹಲವು ಅಕ್ಷರಗಳು ಸ್ಪಷ್ಟವಾಗಿ ಗೋಚರಿಸುತ್ತಿಲ್ಲ. ಪೂರ್ಣ ಮಣ್ಣಾಗಿದ್ದರೂ ಪತ್ರವು ಗೌಪ್ಯ ಪ್ರೇಮವನ್ನು ಬಹಿರಂಗಪಡಿಸುತ್ತಿದೆ.

ಕ್ಯಾಡ್‌ ಬರಿ ಜಾಹೀರಾತಿನೊಂದಿಗೆ ನೆಟ್ಟಿಗರ ಹೃದಯ ಗೆದ್ದ ಶಾರುಖ್ ಖಾನ್

ಪ್ರತಿ ಮಧ್ಯರಾತ್ರಿಯಂದು ಇಬ್ಬರೂ ಪ್ರೇಮಿಗಳು ಸಂಧಿಸುತ್ತಿದ್ದರು. ಜತೆಗೆ ಪತ್ರ ಬರೆದಾತನ ಸರ್‌ನೇಮ್‌ ’ ಹ್ಯಾಬ್‌ಗುಡ್‌ ಅಥವಾ ಹ್ಯಾಲ್‌ಗುಡ್‌’ ಎನ್ನುವುದು ಮಾತ್ರವೇ ಪತ್ರದಿಂದ ಸ್ಪಷ್ಟವಾಗಿ ತಿಳಿದುಬಂದಿದೆ. ಬಾಲಕನಿಗೆ ಪ್ರೇಮಿಗಳ ಕಷ್ಟದ ಬಗ್ಗೆ ವಿವರಿಸಿದ ತಾಯಿಯು, ಇಂಥ ಪತ್ರಗಳು ಮನುಷ್ಯನ ಜೀವನದ ಪ್ರಮುಖ ಘಟ್ಟಗಳನ್ನು ಮೆಲುಕು ಹಾಕುವತ್ತ ಕೊಂಡೊಯ್ಯುತ್ತವೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...