alex Certify ಇಷ್ಟೆಲ್ಲಾ ಆರೋಗ್ಯ ಲಾಭ ತಂದುಕೊಡುತ್ತೆ ʼಸ್ವೀಟ್ ಕಾರ್ನ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಷ್ಟೆಲ್ಲಾ ಆರೋಗ್ಯ ಲಾಭ ತಂದುಕೊಡುತ್ತೆ ʼಸ್ವೀಟ್ ಕಾರ್ನ್ʼ

ಬೇಯಿಸಿ ಲೈಟಾಗಿ ಉಪ್ಪು-ಕಾರ, ಮೆಣಸಿನ ಪುಡಿ ಸಿಂಪಡಿಸಿದ ಸ್ವೀಟ್ ಕಾರ್ನ್ ನೋಡಿದರೆ ಬಾಯಲ್ಲಿ ನೀರೂರದೆ ಇರದು. ಇದನ್ನು ಸೇವಿಸುವುದರ ಹಿಂದಿನ ಲಾಭಗಳು ಏನು ತಿಳಿಯಿರಿ.

* ಇದರಲ್ಲಿ ಆಹಾರ ಸಂಬಂಧಿತ ನಾರಿನಂಶ, ವಿಟಮಿನ್ ಗಳು, ಆಂಟಿ ಆಕ್ಸಿಡೆಂಟ್ ಸಮೃದ್ಧಿಯಾಗಿರುತ್ತದೆ. ಇದರಲ್ಲಿನ ಪೆರುಲಿಕ್ ಆಮ್ಲ ಕೆಲವು ವಿಧವಾದ ಕ್ಯಾನ್ಸರ್ ಗಳನ್ನು ನಿವಾರಿಸುವುದಷ್ಟೇ ಅಲ್ಲ, ಇನ್ನೂ ಅನೇಕ ವ್ಯಾಧಿಗಳನ್ನು ಬರದಂತೆ ತಡೆಗಟ್ಟುತ್ತದೆ.

* ಸ್ವೀಟ್ ಕಾರ್ನ್ ನಲ್ಲಿರುವ ಬಿ ವಿಟಮಿನ್ ಕಣ್ಣಿನ ಆರೋಗ್ಯಕ್ಕೆ ಉತ್ತಮ.

* ಇದರಲ್ಲಿ ಸಿಹಿ ಅಂಶ ಕಡಿಮೆ. ಇದರಲ್ಲಿ ಕ್ಯಾಲೋರಿಗಳು ಕಡಿಮೆ. ಆದ್ದರಿಂದ ಪ್ರಮಾಣ ಮೀರದೆ ಇದನ್ನು ನಿತ್ಯವೂ ಸೇವಿಸಬಹುದು.

* ಸ್ವೀಟ್ ಕಾರ್ನ್ ಸೇವಿಸಿದರೆ ಜೀರ್ಣಕ್ರಿಯೆ ವೃದ್ಧಿಯಾಗುತ್ತದೆ.

* ಸ್ವೀಟ್ ಕಾರ್ನ್ ನಲ್ಲಿ ಪುಷ್ಕಳವಾಗಿರುವ ಫಾಲೆಟ್ ಹೃದಯ ಸಂಬಂಧಿತ ಸಮಸ್ಯೆಗಳು ಬರದಂತೆ ತಡೆಗಟ್ಟುತ್ತದೆ. ಹೃದಯದ ಆರೋಗ್ಯವನ್ನು ಸಂರಕ್ಷಿಸುತ್ತದೆ.

* ಇದರಲ್ಲಿನ ಥಯಾಮಿನ್ ಮೆದುಳಿನ ಕಾರ್ಯ ವೈಖರಿಯನ್ನು ಮೆರಗುಗೊಳಿಸುತ್ತದೆ.

* ಇದರಲ್ಲಿರುವ ಜಿಯಾಗ್ಮಾಥಿನ್ ಎಂಬ ಪ್ರತ್ಯೇಕವಾದ ಆಂಟಿ ಆಕ್ಸಿಡೆಂಟ್ಸ್ ಕಣ್ಣುಗಳ ಆರೋಗ್ಯವನ್ನು ಬಹಳ ಸೊಗಸಾಗಿ ಕಾಪಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...