alex Certify ಆರ್ಯನ್ ಬೆಂಬಲಿಸುವ ಭರದಲ್ಲಿ ನ್ಯಾಯಾಂಗದ ನಿಂದನೆ ಮಾಡಿದ್ರಾ ಸೆಲೆಬ್ರಿಟಿಗಳು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರ್ಯನ್ ಬೆಂಬಲಿಸುವ ಭರದಲ್ಲಿ ನ್ಯಾಯಾಂಗದ ನಿಂದನೆ ಮಾಡಿದ್ರಾ ಸೆಲೆಬ್ರಿಟಿಗಳು…?

ಐಷಾರಾಮಿ ಕ್ರೂಸ್‌ನಲ್ಲಿ ಸ್ನೇಹಿತರೊಂದಿಗೆ ರೇವ್‌ ಪಾರ್ಟಿ ಮಾಡುತ್ತಾ ಎನ್‌ಸಿಬಿ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿರುವ ಬಾಲಿವುಡ್‌ನ ಕಿಂಗ್‌ ಖಾನ್‌ ’ಶಾರುಖ್‌’ ಪುತ್ರ ಆರ್ಯನ್‌ ಖಾನ್‌ಗೆ ಬುಧವಾರ ವಿಶೇಷ ಕೋರ್ಟ್‌ ಜಾಮೀನು ನಿರಾಕರಿಸಿದೆ.

ಆತ ಮತ್ತು ಬಂಧಿತ ನಟಿ ಮುನ್‌ಮುನ್‌ ಧಮೆಚಾ ನಡೆಸಿರುವ ವಾಟ್ಸಾಪ್ ಚಾಟ್‌ನಲ್ಲಿ ಡ್ರಗ್ಸ್‌ ಜಾಲ ಹಾಗೂ ಪೆಡ್ಲರ್‌ಗಳ ಬಗ್ಗೆ ವಿವರಗಳಿವೆ. ಆರ್ಯನ್‌ ಖಾನ್‌ ನಿತ್ಯ ಡ್ರಗ್ಸ್‌ ಸೇವಿಸುತ್ತಿದ್ದ ಎನ್ನುವುದಕ್ಕೂ ಚಾಟ್‌ನಲ್ಲಿ ಸಾಕಷ್ಟು ಪುರಾವೆಗಳಿವೆ. ಅಲ್ಲದೇ ಆರ್ಯನ್‌ ಪ್ರಭಾವಿಯಾಗಿದ್ದು, ಜಾಮೀನು ಮೇಲೆ ಹೊರಬಂದಲ್ಲಿ ಸಾಕ್ಷ್ಯ ನಾಶಪಡಿಸಬಹುದು ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

ನ್ಯಾಯಾಧೀಶ ವಿ.ವಿ. ಪಾಟೀಲ್‌ ಅವರು ತಮ್ಮ 21 ಪುಟಗಳ ಆದೇಶವನ್ನು ಓದಿದ ಕೂಡಲೇ ಬಾಲಿವುಡ್‌ನ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ಹೊರಹಾಕಲು ಮುಗಿಬಿದ್ದಿದ್ದಾರೆ. ನಿರ್ಮಾಪಕರಾದ ಹನ್ಸಲ್‌ ಮೆಹ್ತಾ ಅವರು, ” ಕಾನೂನಿನ ಅಪಹಾಸ್ಯ ಮುಂದುವರಿದಿದೆ, ಅಗ್ನಿ ಪರೀಕ್ಷೆ ಕೂಡ ” ಎಂದು ಪರೋಕ್ಷವಾಗಿ ಕೋರ್ಟ್‌ ವಿರುದ್ಧ ಕಿಡಿಕಾರಿದ್ದಾರೆ. ಜತೆಗೆ ಖಾನ್‌ ಕುಟುಂಬಕ್ಕೆ ಸಾಂತ್ವನ ಹೇಳುವಂತೆ ಟ್ವೀಟ್‌ನಲ್ಲೇ ಬಿಂಬಿಸಿದ್ದಾರೆ.

ಬೆಟ್ಟದ ನೆಲ್ಲಿಯಲ್ಲಿದೆ ಹಲವು ʼಆರೋಗ್ಯʼಕರ ಪ್ರಯೋಜನ

ಇವರಂತೆಯೇ ಒಂದು ಹೆಜ್ಜೆ ಮುಂದೆ ಹೋದ ಬಾಲಿವುಡ್‌ ನಟಿ ಹಾಗೂ ಸದಾಕಾಲ ವಿವಾದಗಳಿಂದಲೇ ಸುದ್ದಿಯಲ್ಲಿರುವ ಸ್ವರಾ ಭಾಸ್ಕರ್‌ ಅವರು, ” ಕಾನೂನು ಹಾಗೂ ನ್ಯಾಯವನ್ನು ಅದರ ರಕ್ಷಕರೇ ಅಲ್ಲಗಳೆದಿದ್ದಾರೆ. ನ್ಯಾಯವು ನಿರ್ಲಕ್ಷ್ಯಕ್ಕೆ ಒಳಗಾಗಿದೆ ” ಎಂದು ಟ್ವೀಟ್‌ನಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಖಾನ್‌ ಕುಟುಂಬಕ್ಕೆ ಹತ್ತಿರ ಇರುವವರು, ಹತ್ತಿರವಾಗಲು ಬಯಸುತ್ತಿರುವ ಬಾಲಿವುಡ್‌ ಮಂದಿ ಟ್ವಿಟರ್‌ನಲ್ಲಿ ’ ವಿ ಸ್ಟ್ಯಾಂಡ್‌ ವಿತ್‌ ಕಿಂಗ್‌ ’ ಎಂದು ಟ್ವೀಟ್‌ ಮಾಡುತ್ತಾ ಟ್ರೆಂಡಿಂಗ್‌ ಕೂಡ ಮಾಡುತ್ತಿದ್ದಾರೆ. ಮುಂಬಯಿನಲ್ಲಿರುವ ಶಾರುಖ್‌ ಅಭಿಮಾನಿಗಳು ನಟನ ಬಂಗಲೆ ’ಮನ್ನತ್‌’ ಎದುರು ನಿತ್ಯವೂ ಜಮಾಯಿಸಿಕೊಂಡು ಬೆಂಬಲದ ಪೋಸ್ಟರ್‌ಗಳನ್ನು ತೋರಿಸುತ್ತಿದ್ದಾರಂತೆ.

ನರಕ ಚತುರ್ದಶಿಯಂದು ಅವಶ್ಯಕವಾಗಿ ಮಾಡಿ ಈ ಪೂಜೆ

ಇನ್ನೊಂದೆಡೆ, ಕಳೆದ ವಾರ ತಮ್ಮ ಜನ್ಮದಿನದಂದು ಮಗನಿಗೆ ಜಾಮೀನು ಸಿಗಬಹುದು ಎಂದು ನಿರೀಕ್ಷೆಯಲ್ಲಿದ್ದ ಶಾರುಖ್‌ ಪತ್ನಿ ಗೌರಿ ಖಾನ್‌ಗೆ ಭಾರಿ ನಿರಾಸೆಯಾಗಿತ್ತು. ಹಾಗಾಗಿ ಅವರು ಆರ್ಯನ್‌ ಮನೆಗೆ ಬರುವವರೆಗೆ ಮನೆಯಲ್ಲಿ ಸಿಹಿ ತಿನಿಸು ಮಾಡುವುದೇ ಬೇಡ ಎಂದು ಸಿಬ್ಬಂದಿಗೆ ಸೂಚಿಸಿದ್ದಾರಂತೆ. ಅಕ್ಟೋಬರ್‌ 20ರ ಬುಧವಾರ ಕೂಡ ಭಾರಿ ನಿರೀಕ್ಷೆಯಿಂದ ಜಾಮೀನಿಗಾಗಿ ಕಾಯುತ್ತಿದ್ದ ಗೌರಿ ಖಾನ್‌ಗೆ ಪುನಃ ನಿರಾಶೆಯಾಗಿದೆ.

ಆರ್ಯನ್‌ ಪರವಾಗಿ ಶಾರುಖ್‌ ಕುಟುಂಬ ನೇಮಿಸಿರುವ ಖ್ಯಾತ ವಕೀಲರ ತಂಡವು ಗುರುವಾರದಂದೇ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದೆ. ಅ.2ರ ಮಧ್ಯರಾತ್ರಿಯಿಂದ ಆರ್ಯನ್‌ ಎನ್‌ಸಿಬಿ ವಶದಲ್ಲಿದ್ದಾರೆ. ಸದ್ಯ ಆರ್ಥರ್ ರಸ್ತೆಯ ಜೈಲಿನಲ್ಲಿ ಬಂಧಿಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...