alex Certify ಪ್ರೀತಿಸಿದ ಹುಡುಗಿ ಜೊತೆ ಮಠದ ಸ್ವಾಮೀಜಿ ಪರಾರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿಸಿದ ಹುಡುಗಿ ಜೊತೆ ಮಠದ ಸ್ವಾಮೀಜಿ ಪರಾರಿ…!

ಎರಡು ವರ್ಷಗಳ ಹಿಂದಷ್ಟೇ ಸನ್ಯಾಸತ್ವ ಸ್ವೀಕರಿಸಿ ಮಠಾಧಿಪತಿಯಾಗಿದ್ದ ಸ್ವಾಮೀಜಿಯೊಬ್ಬರು ತಾವು ಪ್ರೀತಿಸಿದ ಹುಡುಗಿ ಜೊತೆ ರಾತ್ರೋರಾತ್ರಿ ಪರಾರಿಯಾಗಿರುವ ಘಟನೆ ನಡೆದಿದೆ.

ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಸೋಲೂರಿನ ಗದ್ದುಗೆ ಮಠದ ಶಿವ ಮಹಾಂತ ಸ್ವಾಮಿ ಹರೀಶ್ ನಾಪತ್ತೆಯಾಗಿರುವ ಸ್ವಾಮೀಜಿಯಾಗಿದ್ದು, ಇವರು ಅದಕ್ಕೂ ಮುನ್ನ ನನಗೆ ಸನ್ಯಾಸತ್ವ ಇಷ್ಟವಿಲ್ಲ. ಹೀಗಾಗಿ ಮಠ ಬಿಟ್ಟು ಹೋಗುತ್ತಿದ್ದೇನೆ ಎಂದು ಪತ್ರ ಬರೆದಿಟ್ಟಿದ್ದಾರೆ ಎಂದು ಹೇಳಲಾಗಿದೆ.

ಸನ್ಯಾಸತ್ವ ಸ್ವೀಕರಿಸುವ ಮುನ್ನ ಹರೀಶ್ ಎಂಬ ಈ ವ್ಯಕ್ತಿ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದರು ಎಂದು ಹೇಳಲಾಗಿದ್ದು, ಆಕೆಗೆ ಒಂದೂವರೆ ತಿಂಗಳ ಹಿಂದಷ್ಟೇ ಮದುವೆಯಾಗಿತ್ತು ಎಂದು ತಿಳಿದು ಬಂದಿದೆ. ಈಗ ಅದೇ ಯುವತಿಯೊಂದಿಗೆ ಸ್ವಾಮೀಜಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...