ವಿಜಯಪುರ: ಮೀಸಲಾತಿಯಲ್ಲಿ ಒಕ್ಕಲಿಗರಿಗೆ 2ಸಿ, ಲಿಂಗಾಯಿತರಿಗೆ 2ಡಿ ಕೆಟಗರಿ ಸೃಷ್ಟಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ.
ಮೀಸಲಾತಿಗಾಗಿ ಬೀದಿಗಿಳಿದು ಹೋರಾಟ ಮತ್ತು ಹಕ್ಕೊತ್ತಾಯ ಮಾಡಿದ್ದು ನಾವು. ಉಳಿದ ಲಿಂಗಾಯಿತರನ್ನು 2 ಡಿ ಗೆ ಸೇರಿಸುವುದಾಗಿ ಹೇಳಿದ್ದಾರೆ. 2 ಡಿ ಮೀಸಲಾತಿ ಕ್ರೆಡಿಟ್ ಪಂಚಮಸಾಲಿಯವರಿಗೆ ಸಲ್ಲುತ್ತದೆ. ದುಡಿದವರು ನಾವು. ನಮ್ಮ ಪಾಲು ಎಷ್ಟು ಎಂದು ಶ್ರೀಗಳು ಪ್ರಶ್ನಿಸಿದ್ದಾರೆ.
2 ಡಿ ಯಲ್ಲಿ ಪಂಚಮಸಾಲಿಯವರಿಗೆ ಮೀಸಲು ಪ್ರಮಾಣ ಎಷ್ಟು ಎಂದು ಪ್ರಶ್ನಿಸಿದ ಅವರು, ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವ ಸಂಪುಟದಲ್ಲಾದ ನಿರ್ಣಯ ಗೊಂದಲಕ್ಕೀಡು ಮಾಡಿದೆ. ಮೀಸಲಾತಿ ಪ್ರಮಾಣ ಎಷ್ಟು ಎನ್ನುವುದನ್ನು ಸರ್ಕಾರ ಸ್ಪಷ್ಟಪಡಿಸಲಿ ಎಂದು ವಿಜಯಪುರದಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದ್ದಾರೆ.