alex Certify ಮಾಜಿ ಪತಿಯ ಹಾಲಿ ಗೆಳತಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಸುಸಾನ್ನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಜಿ ಪತಿಯ ಹಾಲಿ ಗೆಳತಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಸುಸಾನ್ನೆ

ಬಾಲಿವುಡ್ ನಟ ಹೃತಿಕ್ ರೋಷನ್‌ರ ಮಾಜಿ ಪತ್ನಿ ಸುಸಾನ್ನೆ ಈಗಲೂ ಸಹ ತಮ್ಮ ಮಾಜಿ ಪತಿಯೊಂದಿಗೆ ಸ್ನೇಹಶೀಲ ಸಂಬಂಧ ಕಾಪಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ನಡುವೆ ಯಾವ ಮಟ್ಟದ ಅರ್ಥಪೂರ್ಣ ಹೊಂದಾಣಿಕೆ ಇದೆ ಎಂಬುದನ್ನು ನೋಡಬಹುದಾಗಿದೆ.

ಈಗ ಇಂಟೀರಿಯರ್‌ ಡಿಸೈನರ್‌ ಆಗಿರುವ ಸುಸಾನ್ನೆ, ತಾವು ರೆಡಿಯಾಗುತ್ತಿರುವ ಸೆಲ್ಫೀ ಚಿತ್ರವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ಧಾರೆ.

ಇಲ್ಲಿದೆ ಮುಟ್ಟಿನ ಬಗ್ಗೆ ಇರುವ ಕಲ್ಪನೆಗಳ ಸತ್ಯ – ಮಿಥ್ಯ

ಚಿತ್ರದಲ್ಲಿ, ಸುಸ್ಸಾನ್ನೆ ಕೆಂಪು ತುಟಿಗಳು ಮತ್ತು ನೀಲಿ ಕಣ್ಣುಗಳಲ್ಲಿ ಆತ್ಮವಿಶ್ವಾಸದಿಂದ ಕಾಣುತ್ತಿದ್ದು, ಮಿನುಗುವ ಕಪ್ಪು ಉಡುಪಿನಲ್ಲಿ ಕಂಗೊಳಿಸುತ್ತಿದ್ದಾರೆ. “ನಾವು ಜೀವಂತವಾಗಿ ಅನುಭವಿಸಲು ಎಲ್ಲವನ್ನೂ ಅಪಾಯಕ್ಕೆ ತೆಗೆದುಕೊಳ್ಳುತ್ತೇವೆ… ನಿಜಕ್ಕೂ.#nobodycantakemybreath #weekend” ಎಂದು ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ. ಸುಸಾನ್ನೆ.

ಸುಸಾನ್ನೆ ಈ ಚಿತ್ರ ಹಂಚಿಕೊಳ್ಳುತ್ತಲೇ ಹೃತಿಕ್ ಮಾತ್ರವಲ್ಲದೇ ಆಕೆಯ ಬಾಯ್‌ಫ್ರೆಂಡ್ ಎನ್ನಲಾದ ಅರ್ಸ್ಲಾನ್ ಗೋನಿಯ ಗಮನ ಸೆಳೆದಿದೆ. ಹೃತಿಕ್ ಅವರು ಈ ಚಿತ್ರಕ್ಕೆ ಹಾರ್ಟ್ ಎಮೋಜಿ ಹಾಕಿದರೆ ಗೋನಿ ಬೆಂಕಿ ಮತ್ತು ಹಾರ್ಟ್ ಎಮೋಜಿಗಳನ್ನು ಕಾಮೆಂಟ್ ಸೆಕ್ಷನ್‌ನಲ್ಲಿ ಹಾಕಿದ್ದಾರೆ.

2000ದಲ್ಲಿ ಮದುವೆ ಮಾಡಿಕೊಂಡ ಹೃತಿಕ್ ಮತ್ತು ಸುಸಾನ್ನೆ, 14 ವರ್ಷಗಳ ಬಳಿಕ ವಿಚ್ಛೇದನ ಪಡೆದಿದ್ದಾರೆ. ಇಬ್ಬರಿಗೂ ಹೃಹಾನ್ ಮತ್ತು ಹೃದಾನ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.

ಇದೇ ವೇಳೆ, ಹೃತಿಕ್ ರೋಷನ್‌ರ ಗೆಳತಿ ಎನ್ನಲಾದ ಸಬಾ ಅಜ಼ಾದ್‌ರ ಪೋಸ್ಟ್ ಒಂದಕ್ಕೆ ಇನ್‌ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿರುವ ಸುಸಾನ್ನೆ ’ನೀವು ಸೂಪರ್‌ ಕೂಲ್!’ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...