alex Certify ಮಾಜಿ ಪತಿಯ ಹಾಲಿ ಗೆಳತಿಯನ್ನು ಹಾಡಿ ಹೊಗಳಿದ ಸುಸೇನ್ ಖಾನ್…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಜಿ ಪತಿಯ ಹಾಲಿ ಗೆಳತಿಯನ್ನು ಹಾಡಿ ಹೊಗಳಿದ ಸುಸೇನ್ ಖಾನ್…..!

ವಿಚ್ಛೇದನದ ನಂತರವೂ ಹೃತಿಕ್ ರೋಷನ್ ಮತ್ತು ಸುಸೇನ್ ಖಾನ್ ಅವರು ಸೌಹಾರ್ದಯುತ ಸಂಬಂಧವನ್ನು ಹೊಂದಿದ್ದಾರೆ. ಅವರು ತಮ್ಮ ಮಕ್ಕಳನ್ನು ಸಹ-ಪೋಷಕರಾಗಿ ಬೆಳೆಸುತ್ತಾ ಉತ್ತಮ ಭಾಂದವ್ಯ ಮುಂದುವರೆಸಿಕೊಂಡು ಬಂದಿದ್ದಾರೆ.

ಇತ್ತೀಚೆಗೆ ಸುಸೇನ್ ಅರ್ಸಾಲನ್ ಗೋನಿಯನ್ನ ಡೇಟ್ ಮಾಡುತ್ತಿದ್ದಾರೆ ಎಂಬ ಸುದ್ದಿ ಸದ್ದು ಮಾಡುತ್ತಿದೆ. ಜೊತೆಗೆ ಹೃತಿಕ್ ರೋಶನ್ ಸಹ, ನಟಿ ಇತ್ತೀಚೆಗೆ ಸಬಾ ಆಜಾದ್ ಜೊತೆಗಿನ ಡಿನ್ನರ್ ಡೇಟ್‌ಗಳ ಮೂಲಕ ಸಾಕಷ್ಟು ಸುದ್ದಿಯಾಗಿದ್ದಾರೆ.

ಕಳೆದ ರಾತ್ರಿ, ಇಮಾದ್ ಶಾ ಜೊತೆಗಿನ ಎಲೆಕ್ಟ್ರಾನಿಕ್ ಮ್ಯೂಸಿಕ್ ಬ್ಯಾಂಡ್ Madboy/Mink ನ ಭಾಗವಾಗಿರುವ ಸಬಾ ಆಜಾದ್ ಅವರು ಜುಹುದಲ್ಲಿನ ವ್ಯಾಲೆಂಟೈನ್ಸ್ ಸ್ಪೆಷಲ್ ನೈಟ್‌ನಲ್ಲಿ ಪ್ರದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಸೇನ್ ಖಾನ್ ಸಬಾ ಅವರನ್ನು ಶ್ಲಾಘಿಸಿದ್ದಾರೆ.

ಕ್ಷಮೆ ಕೇಳುವಂತಹ ಹೇಳಿಕೆ ನೀಡಿಲ್ಲ: ಡಿಕೆಶಿಗೆ ಜಮೀರ್ ಟಾಂಗ್

ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ‌, ಇದು ಅದ್ಭುತವಾದ ಸಂಜೆ..! ನೀವು ಸೂಪರ್ ಕೂಲ್ ಮತ್ತು ಅತ್ಯಂತ ಪ್ರತಿಭಾವಂತೆ ಎಂದು ಸಬಾ ಅವರನ್ನ ಟ್ಯಾಗ್ ಮಾಡಿದ್ದಾರೆ.‌ ಸಬಾ ಸಹ ಸುಸೇನ್ ಸ್ಟೋರಿಯನ್ನು, ಅದನ್ನು ತನ್ನ ಇನ್‌ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಧನ್ಯವಾದ ತಿಳಿಸುವುದರ ಜೊತೆಗೆ ನೀವು ನನ್ನ ಕಾರ್ಯಕ್ರಮಕ್ಕೆ ಬಂದಿದ್ದು ಸಂತೋಷವಾಯಿತು ಎಂದು ಉತ್ತರಿಸಿದ್ದಾರೆ.‌

Saba Azad

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...