
ಇನ್‌ಸ್ಟಾಗ್ರಾಂನಲ್ಲಿ ಗೋನಿಯೊಂದಿಗೆ ತಮ್ಮ ಚಿತ್ರವೊಂದನ್ನು ಹಂಚಿಕೊಂಡ ಸೂಸನ್, “ಹ್ಯಾಪಿ ಹ್ಯಾಪ್ಪೀ ಹ್ಯಾಪ್ಪಿಯೆಸ್ಟ್ ಬರ್ತ್‌ಡೇ….. ನೀವು ಅರ್ಹರಾಗಿರುವ ಪ್ರತಿಯೊಂದೂ ತುಂಬಿರುವ ಜಗತ್ತು ನಿಮ್ಮದಾಗಲಿ ಎಂದು ನಾನು ಹಾರೈಸುತ್ತೇನೆ. ನಾನು ಕಂಡಿರುವ ಅತ್ಯಂತ ಸುಂದರವಾದ ಎನರ್ಜಿ ನೀವು. ಹೀಗೇ ಮಿನುಗುತ್ತಿರಿ” ಎಂದು ಫೋಟೋಗೆ ಕ್ಯಾಪ್ಷನ್ ಕೊಟ್ಟಿದ್ದಾರೆ.
ಹೃತಿಕ್ ರೋಷನ್ ರಿಂದ ವಿಚ್ಛೇದನ ಪಡೆದ ಬಳಿಕ ಅರ್ಸಲನ್ ಗೋನಿ ಜೊತೆಗೆ ಆಗಾಗ ಕಾಣಿಸಿಕೊಳ್ಳುವ ಸೂಸನ್ ಕಳೆದ ತಿಂಗಳು ಅನುಷ್ಕಾ ರಂಜನ್‌ರ ಮದುವೆ ಸಂಭ್ರಮದಲ್ಲೂ ಸಹ ಜೊತೆಯಾಗಿ ಕಂಡಿದ್ದಾರೆ.
ಹೃತಿಕ್-ಸೂಸನ್ ಮದುವೆ ಮುರಿದು ಬೀಳುವ ಮುನ್ನ ಇಬ್ಬರಿಗೂ ಹೃದಾನ್ ಮತ್ತು ಹೃಹಾನ್ ಎಂಬ ಇಬ್ಬರು ಗಂಡು ಮಕ್ಕಳು ಜನಿಸಿದ್ದರು.