ಜಮ್ಮು & ಕಾಶ್ಮೀರದ ಅಖ್ನೂರ್ ಸೆಕ್ಟರ್ನ ಪಾಕಿಸ್ತಾನದ ಗಡಿಯ ಬಳಿ ನೀಲಿ ಹಾಗೂ ಹಳದಿ ಬಣ್ಣದ ಉಂಗುರವನ್ನು ಕಾಲಿಗೆ ಧರಿಸಿದ್ದ ಶಂಕಿತ ಪಾರಿವಾಳವೊಂದನ್ನು ಸೆರೆಹಿಡಿಯಲಾಗಿದೆ ಎಂದು ಬಿಎಸ್ಎಫ್ ಮಾಹಿತಿ ನೀಡಿದೆ.
ಗಡಿ ಭದ್ರತಾ ಪಡೆ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಪಾರಿವಾಳವನ್ನು ಸೆಪ್ಟೆಂಬರ್ 1ರಂದು ಸಂಜೆ 6:15ರ ಸುಮಾರಿಗೆ ಹಿಡಿಯಲಾಗಿದೆ.
ಬಿಎಸ್ಎಫ್ ಪಡೆ ಸೆರೆ ಹಿಡಿದ ಈ ಪಾರಿವಾಳದ ಕಾಲಿಗೆ ನೀಲಿ ಹಾಗೂ ಹಳದಿ ಬಣ್ಣದ ಉಂಗುರವನ್ನು ತೊಡಿಸಲಾಗಿತ್ತು. ಬಲಗಾಲಿನ ಉಂಗುರದಲ್ಲಿ 0315-787659 ಎಂದು ಬರೆಯಲಾಗಿತ್ತು. ಹಾಗೂ ಎಡಗಾಲಿನ ಉಂಗುರದಲ್ಲಿ ಓಕೆ ಎಂದು ಬರೆಯಲಾಗಿತ್ತು. ಈ ವಿಚಾರವಾಗಿ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೆಲ ಸಮಸ್ಯೆಗಳನ್ನು ಹೆಚ್ಚು ಮಾಡುತ್ತೆ ‘ಸೌತೆಕಾಯಿ’
ಮೇ ತಿಂಗಳ ಆರಂಭದಲ್ಲಿಯೂ ಸ್ಥಳೀಯರು ಕಥುವಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಇದೇ ರೀತಿ ಕಾಲಿಗೆ ಉಂಗುರ ಧರಿಸಿದ್ದ ಪಾರಿವಾಳವನ್ನು ಹಿಡಿದಿದ್ದರು.