ನಟಿ ಸುಶ್ಮಿತಾ ಸೆನ್ ಅವರು ತಾವು 1994ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯ ವಿಜೇತೆಯಾದ ಕ್ಷಣಗಳ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಈ ಗೌರವವನ್ನು ದೇಶಕ್ಕೆ ತಂದ ಮೊದಲ ವ್ಯಕ್ತಿಯಾದ ಸುಶ್ಮಿತಾ ಬಳಿಕ ಯುಕ್ತಾ ಮುಖೆ, ಲಾರಾ ದತ್ತಾ ಹಾಗೂ ಈ ವರ್ಷ ಹರ್ನಾಜ಼್ ಸಂಧು ಈ ಪಟ್ಟಿ ಸೇರಿದ್ದಾರೆ.
ತಾವು ಭುವನ ಸುಂದರಿ ಮುಕುಟ ಧರಿಸುತ್ತಲೇ ತಮಗೆ ಕೇಳಲಾದ ಪ್ರಶ್ನೆಗೆ ಉತ್ತರ ನೀಡುವಷ್ಟು ಇಂಗ್ಲಿಷ್ ಆಗ ತಮಗೆ ಬರುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ ಸುಶ್ಮಿತಾ.
ELECTION BREAKING: ಉತ್ತರ ಪ್ರದೇಶದಲ್ಲಿ ಮೋದಿ –ಯೋಗಿ ಮೋಡಿ; ಆರಂಭದಲ್ಲೇ ಅರ್ಧ ಶತಕ ಬಾರಿಸಿದ ಬಿಜೆಪಿ ಭಾರಿ ಮುನ್ನಡೆ
ಕೊನೆಯ ಸುತ್ತಿನಲ್ಲಿ ನಟಿಯನ್ನು ಕೇಳಲಾದ ಪ್ರಶ್ನೆಯೊಂದರಲ್ಲಿ, “ನಿಮ್ಮ ಪ್ರಕಾರ ಒಬ್ಬ ಮಹಿಳೆಯಲ್ಲಿ ಇರಬಹುದಾದ ಮುಖ್ಯ ಅಂಶ ಏನು?” ಎಂದು ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಸುಶ್ಮಿತಾ, “ಸ್ತ್ರೀಯಾಗಿ ಜನಿಸುವುದೇ ದೇವರು ಕೊಟ್ಟ ಒಂದು ವರ ಅದನ್ನು ನಾವೆಲ್ಲಾ ಪ್ರಶಂಶಿಸಬೇಕು. ಆಕೆ ಪುರುಷನಿಗೆ ಆರೈಕೆ, ಕಾಳಜಿ, ಹಂಚಿಕೊಳ್ಳುವುದು ಹಾಗೂ ಪ್ರೀತಿ ಮಾಡುವುದು ಏನೆಂದು ಹೇಳಿಕೊಡುತ್ತಾಳೆ. ಅದುವೇ ಒಬ್ಬ ಮಹಿಳೆಯ ಮೂಲ ಅಂಶ,” ಎಂದಿದ್ದರು.
“ನಾನು ಹಿಂದಿ ಮಾಧ್ಯಮದಲ್ಲಿ ಓದಿ ಬಂದವಳಾದ ಕಾರಣ, ನನಗೆ ಆ ದಿನಗಳಲ್ಲಿ ಅಷ್ಟಾಗಿ ಇಂಗ್ಲಿಷ್ ಬರುತ್ತಿರಲಿಲ್ಲ. ಅವರು ಕೇಳಿದ ಪ್ರಶ್ನೆಯಲ್ಲಿ ’ಎಸೆನ್ಸ್’ ಎಂಬ ಪದದ ಅರ್ಥವೇನೆಂದು ನನಗೆ ಗೊತ್ತೇ ಇರಲಿಲ್ಲ. ಆದರೂ ಸಹ ಆ ಪ್ರಶ್ನೆಗೆ ನಾನು ಸ್ಪಷ್ಟವಾಗಿ, 18ನೇ ವಯಸ್ಸಿನಲ್ಲೇ ಹಾಗೆ ಉತ್ತರ ಕೊಟ್ಟೆ. ದೇವರೆಲ್ಲೊ ನನ್ನ ನಾಲಿಗೆ ಮೇಲೆ ಕುಳಿತು ಹಾಗೆ ಆಡಿಸಿದ ಎಂದು ಭಾವಿಸುತ್ತೇನೆ,” ಎಂದಿದ್ದಾರೆ ಸುಶ್ಮಿತಾ.