alex Certify ಸೂರ್ಯಕುಮಾರ್ ಯಾದವ್, ಪೃಥ್ವಿ ಶಾ ಅವರ ‘ಬಾಜಿಗರ್’ ಮಿಮಿಕ್ರಿಗೆ ಅಭಿಮಾನಿಗಳು ಫಿದಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೂರ್ಯಕುಮಾರ್ ಯಾದವ್, ಪೃಥ್ವಿ ಶಾ ಅವರ ‘ಬಾಜಿಗರ್’ ಮಿಮಿಕ್ರಿಗೆ ಅಭಿಮಾನಿಗಳು ಫಿದಾ..!

ಕ್ರಿಕೆಟಿಗರಿಗೂ ಬಾಲಿವುಡ್ ಗೂ ಎಲ್ಲಿಲ್ಲದ ನಂಟು. ಚಿತ್ರ ವೀಕ್ಷಿಸುವುದರ ಜೊತಗೆ ತಾವು ಕೂಡ ದೃಶ್ಯವನ್ನು ಅನುಕರಿಸಿ ವಿಡಿಯೋ ಮಾಡುತ್ತಾರೆ. ಇದೀಗ ಈ ಸಾಲಿಗೆ ಕ್ರಿಕೆಟಿಗರಾದ ಸೂರ್ಯಕುಮಾರ್ ಯಾದವ್ ಹಾಗೂ ಪೃಥ್ವಿ ಶಾ ಸೇರಿಕೊಂಡಿದ್ದಾರೆ. ಬಾಲಿವುಡ್ ಸಿನಿಮಾವೊಂದರ ದೃಶ್ಯವನ್ನು ಅನುಕರಿಸುವ ಮುಖಾಂತರ ತಮ್ಮ ಅಭಿಮಾನಿಗಳನ್ನು ರಂಜಿಸಿದ್ದಾರೆ.

1993ರ ಬಾಲಿವುಡ್ ಥ್ರಿಲ್ಲರ್ ಮೂವಿ ಬಾಜಿಗರ್ ನ ದೃಶ್ಯವನ್ನು ಇವರಿಬ್ಬರು ಕ್ರಿಕೆಟಿಗರು ಅನುಕರಿಸಿರುವ ವಿಡಿಯೋ ಪೋಸ್ಟ್ ಮಾಡಿದ್ದಾರೆ. 2 ಮಿಲಿಯನ್ ಗಳಷ್ಟು ವೀಕ್ಷಣೆ ಪಡೆದಿರುವ ಈ ವಿಡಿಯೋವನ್ನು ಸದ್ಯ ನೆಟ್ಟಿಗರು ಇಷ್ಟಪಟ್ಟಿದ್ದಾರೆ. ಇತ್ತೀಚೆಗೆ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ಸೇರಿಕೊಳ್ಳಲು ಕ್ವಾರಂಟೈನ್ ಮುಗಿಸಿದ್ದ ಯಾದವ್ ಹಾಗೂ ಪೃಥ್ವಿ ಶಾ, ಜಾನಿ ಲಿವರ್ ಹಾಗೂ ದಿನೇಶ್ ಹಿಂಗೂ ಅವರ ಹಾಸ್ಯಮಯ ದೃಶ್ಯವನ್ನು ತಾವು ಮಾಡುವ ಮುಖಾಂತರ ಮರುಸೃಷ್ಟಿಸಿದ್ದಾರೆ. ಸಿನಿಮಾದಲ್ಲಿ ಇರುವಂತೆಯೇ ಇಬ್ಬರು ಕ್ರಿಕೆಟಿಗರು ಒಬ್ಬರಾದ ನಂತರ ಇನ್ನೊಬ್ಬರು ನಿರಂತರವಾಗಿ ನಗುತ್ತಾರೆ.

BREAKING NEWS: ರಾಜ್ಯದಲ್ಲಿಂದು 1432 ಜನರಿಗೆ ಸೋಂಕು, 27 ಜನ ಸಾವು

ಇನ್ನು ಕ್ರಿಕೆಟಿಗರ ನಟನಾ ಕೌಶಲ್ಯಕ್ಕೆ ಅಭಿಮಾನಿಗಳು ನಿಬ್ಬೆರಗಾಗಿಸಿದ್ದು, ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಸೇರಿದಂತೆ ಹಲವಾರು ಮಂದಿ ಪ್ರತಿಕ್ರಿಯಿಸಿದ್ದಾರೆ. “ಕ್ವಾರಂಟೈನ್ ತುಂಬಾ ಕೆಟ್ಟದ್ದು ಹಾಗೂ ಕಷ್ಟಕರವಾಗಿದೆ ಎಂದು ತಿಳಿದಿರಲಿಲ್ಲ” ಅಂತಾ ಒಬ್ಬರು ತಮಾಷೆಯಾಗಿ ಕಮೆಂಟ್ ಮಾಡಿದ್ದರೆ, ಮತ್ತೊಬ್ಬರು ‘ಆ ನಗು…..’ ಎಂದು ಪ್ರತಿಕ್ರಿಯಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...