alex Certify ರಾಶಿ ಬದಲಿಸಿದ ಸೂರ್ಯ: ಈ ನಾಲ್ಕು ರಾಶಿಗಳಿಗೆ ಕಾಡಲಿದೆ ಅಶುಭ ಫಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಶಿ ಬದಲಿಸಿದ ಸೂರ್ಯ: ಈ ನಾಲ್ಕು ರಾಶಿಗಳಿಗೆ ಕಾಡಲಿದೆ ಅಶುಭ ಫಲ

ಸೂರ್ಯ ರಾಶಿ ಬದಲಿಸಿದ್ದಾನೆ. ಧನು ರಾಶಿಗೆ ಸೂರ್ಯನ ಪ್ರವೇಶವಾಗಿದೆ. ಧನು ರಾಶಿಯಲ್ಲಿ ಸೂರ್ಯ ಒಂದು ತಿಂಗಳ ಕಾಲ ಇರಲಿದ್ದಾನೆ. ಜನವರಿ 14ರಂದು ಮಕರ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಸೂರ್ಯನ ರಾಶಿ ಬದಲಾವಣೆ ಅನೇಕ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ನಾಲ್ಕು ರಾಶಿಯವರು ಇನ್ನೊಂದು ತಿಂಗಳು ಎಚ್ಚರಿಕೆಯಿಂದಿರಬೇಕಾಗಿದೆ.

ಕನ್ಯಾ:  ಸೂರ್ಯನ ರಾಶಿ ಬದಲಾವಣೆ ಕನ್ಯಾ ರಾಶಿಯ ಮೇಲೆ ಪ್ರಭಾವ ಬೀರಲಿದೆ. ಮನಸ್ಸು ಸ್ಥಿರವಾಗಿ ಉಳಿಯುವುದಿಲ್ಲ. ಶಾಂತವಾಗಿರಲು ಧ್ಯಾನ ಮಾಡುವುದು ಒಳ್ಳೆಯದು. ಹಾಗೆ ವಿವಾದಗಳಿಂದ ದೂರವಿರಬೇಕು.

ವೃಶ್ಚಿಕ : ವೃಶ್ಚಿಕ ರಾಶಿಯ ಜನರು ಹಣ ಗಳಿಸಲು ತಪ್ಪು ದಾರಿ ತುಳಿಯಬಾರದು. ಇದ್ರಿಂದ ತೊಂದರೆ ಎದುರಾಗುತ್ತದೆ.

ಮಿಥುನ : ಮಿಥುನ ರಾಶಿಯ ಮೇಲೂ ಸೂರ್ಯನ ರಾಶಿ ಬದಲಾವಣೆ ಪ್ರಭಾವ ಬೀರಲಿದೆ. ಈ ಸಮಯದಲ್ಲಿ ಜಾಗರೂಕರಾಗಿರಬೇಕು. ಅತಿಯಾದ ಕೋಪ  ತಪ್ಪಿಗೆ ಕಾರಣವಾಗುತ್ತದೆ.

ಮಕರ :  ಈ ರಾಶಿಯವರಿಗೆ ಆರ್ಥಿಕ ಹೊರೆ ಎದುರಾಗುವ ಸಾಧ್ಯತೆಯಿದೆ. ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರಲಿದೆ.

ವೃಷಭ, ಕರ್ಕ, ಸಿಂಹ, ತುಲಾ ರಾಶಿಯವರಿಗೆ ಸೂರ್ಯನ ರಾಶಿ ಬದಲಾವಣೆ ಮಂಗಳಕರವಾಗಿರಲಿದೆ. ವೃತ್ತಿ ಜೀವನದಲ್ಲಿ ಪ್ರಗತಿಯಾಗಲಿದೆ. ಶತ್ರುಗಳ ವಿರುದ್ಧ ಗೆಲುವಾಗಲಿದೆ. ಕುಂಭ ಮತ್ತು ಮೀನ ರಾಶಿಯವರಿಗೂ ಈ ತಿಂಗಳು ಉತ್ತಮವಾಗಿರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...