alex Certify ಆಕಾಶದಲ್ಲಿ ದೀಪದ ಸಾಲು…! ಬರಿಗಣ್ಣಿನಲ್ಲಿ ಬಾನಂಗಳದ ಬೆಳಕಿನ ಚಿತ್ತಾರ ಕಣ್ತುಂಬಿಕೊಂಡ ಜನಕ್ಕೆ ಭಾರಿ ಕುತೂಹಲ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಕಾಶದಲ್ಲಿ ದೀಪದ ಸಾಲು…! ಬರಿಗಣ್ಣಿನಲ್ಲಿ ಬಾನಂಗಳದ ಬೆಳಕಿನ ಚಿತ್ತಾರ ಕಣ್ತುಂಬಿಕೊಂಡ ಜನಕ್ಕೆ ಭಾರಿ ಕುತೂಹಲ…!

ಸೋಮವಾರ ಸಂಜೆ ಬಾನಂಗಳದಲ್ಲಿ ಸಾಲಾಗಿ ಬಲ್ಬ್ ಜೋಡಿಸಿದ ರೀತಿಯಲ್ಲಿ ಉಪಗ್ರಹಗಳು ಹಾದುಹೋಗಿವೆ. ಅಂದ ಹಾಗೆ, ಇದು ಉಪಗ್ರಹಗಳ ಸರಮಾಲೆಯಾಗಿದೆ.

ನಿನ್ನೆ ಸಂಜೆ 7 ಗಂಟೆಯ ಸುಮಾರಿಗೆ ಆಕಾಶದಲ್ಲಿ ಸಾಲಾಗಿ ಜೋಡಿಸಿದ ವಿದ್ಯುತ್ ಬಲ್ಬ್ ಗಳ ರೀತಿಯಲ್ಲಿ ಬೆಳಕು ಹಾದುಹೋಗಿದ್ದು, ಜನ ಕುತೂಹಲದಿಂದ ವೀಕ್ಷಿಸಿದ್ದಾರೆ. ಕೆಲವರು ತಮ್ಮ ಮೊಬೈಲ್ ಗಳಲ್ಲಿ ದೃಶ್ಯ ಸೆರೆಹಿಡಿದು ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ವೈರಲ್ ಆಗಿದೆ.

ಇದು ಎಲಾನ್ ಮಸ್ಕ್ ಅವರ ಬಾಹ್ಯಾಕಾಶ ಸಂಸ್ಥೆ ಅಮೆರಿಕದ ಸ್ಪೇಸ್ ಎಕ್ಸ್ ಉಡಾವಣೆ ಮಾಡಿದ ಉಪಗ್ರಹಗಳ ಸರಮಾಲೆಯಾಗಿದೆ. ಸ್ಟಾರ್ ಲಿಂಕ್ ಯೋಜನೆಯಡಿ 1804 ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದ್ದು, ಅವುಗಳಲ್ಲಿ 1732 ಕಕ್ಷೆಗಳಲ್ಲಿ ಭೂಮಿಯನ್ನು ಸುತ್ತುತ್ತಿವೆ. ಅಂತಹ ಒಂದು ಗುಂಪಿನ ಉಪಗ್ರಹ ಬಾನಂಗಳದಲ್ಲಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.

ಉಪಗ್ರಹಗಳು ರೈಲಿನ ರೀತಿಯಲ್ಲಿ ಕಾಣಿಸಿಕೊಂಡಿದೆ. ಸೌರ ಫಲಕ ಹೊಂದಿರುವ ಈ ಸರಣಿ ಉಪಗ್ರಹಗಳು ಸೂರ್ಯನ ಬೆಳಕಿನಿಂದ ಪ್ರಕಾಶಿಸಿವೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...