alex Certify ಧೋನಿಗಾಗಿ ಈ ತೀರ್ಮಾನ ಕೈಗೊಂಡ ಸುರೇಶ್​ ರೈನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧೋನಿಗಾಗಿ ಈ ತೀರ್ಮಾನ ಕೈಗೊಂಡ ಸುರೇಶ್​ ರೈನಾ

ಸುರೇಶ್ ರೈನಾ ಹಾಗೂ ಎಂ.ಎಸ್.​ ಧೋನಿ ನಡುವಿನ ಸ್ನೇಹ ಎಷ್ಟು ಗಾಢವಾದದ್ದು ಅನ್ನೋದು ಇಡೀ ಟೀಂ ಇಂಡಿಯಾ ಕ್ರಿಕೆಟ್​ ಅಭಿಮಾನಿಗಳಿಗೆ ತಿಳಿದಿರುವ ವಿಷಯ. ಟೀಂ ಇಂಡಿಯಾದಲ್ಲೂ ಒಟ್ಟಾಗಿ ಆಡಿದ್ದ ಈ ಜೋಡಿ ಐಪಿಎಲ್​​ನಲ್ಲೂ ಒಂದೇ ತಂಡದಲ್ಲಿ ತಮ್ಮ ಪ್ರದರ್ಶನವನ್ನ ನೀಡುತ್ತಾ ಬಂದಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ ಜೀವನಕ್ಕೆ ಎಂ.ಎಸ್.​ ಧೋನಿ 2020ರ ಆಗಸ್ಟ್​ 15ರಂದು ನಿವೃತ್ತಿ ಘೋಷಿಸಿದ್ದರು. ವಿಪರ್ಯಾಸ ಅಂದರೆ ಇದೇ ದಿನದಂದು ಧೋನಿ ನಿವೃತ್ತಿ ಘೋಷಿಸಿದ ಕೆಲವೇ ಕ್ಷಣಗಳಲ್ಲಿ ಸುರೇಶ್​ ರೈನಾ ಕೂಡ ಟೀಂ ಇಂಡಿಯಾಗೆ ಗುಡ್​ ಬೈ ಹೇಳಿದ್ದರು.

ಪ್ರಸ್ತುತ ಸುರೇಶ್​ ರೈನಾ ಅಕ್ಟೋಬರ್​ ತಿಂಗಳಲ್ಲಿ ನಡೆಯಲಿರುವ ಇಂಡಿಯನ್​ ಪ್ರೀಮಿಯರ್​ ಲೀಗ್​ ಪಂದ್ಯಕ್ಕಾಗಿ ಎದುರು ನೋಡುತ್ತಿದ್ದಾರೆ. ಈ ಬಾರಿ ಅವರು ಎಂಎಸ್​ ಧೋನಿಗಾಗಿ ಮತ್ತೊಮ್ಮೆ ಐಪಿಎಲ್​ ಟ್ರೋಫಿ ಗೆಲ್ಲಲೇಬೇಕೆಂಬ ಉತ್ಸಾಹದಲ್ಲಿ ಇದ್ದಾರೆ.

ಸ್ಟಾರ್​ ಸ್ಪೋರ್ಟ್ಸ್​ ಜೊತೆ ನಡೆದ ಸಂದರ್ಶನದಲ್ಲಿ ಮಾತನಾಡಿದ ಸುರೇಶ್​ ರೈನಾ, ನಾನು ಹಾಗೂ ಧೋನಿ ಟೀಂ ಇಂಡಿಯಾ ಮತ್ತು ಚೆನ್ನೈ ಸೂಪರ್​ ಕಿಂಗ್ಸ್ ತಂಡದಲ್ಲಿ ಹಲವು ಬಾರಿ ಜೊತೆಯಾಗಿ ಆಡಿದ್ದೇವೆ. ಧೋನಿ ಟೀಂ ಇಂಡಿಯಾ ಹಾಗೂ ಸಿಎಸ್​ಕೆ ತಂಡದ ಪರವಾಗಿ 200ಕ್ಕೂ ಅಧಿಕ ಪಂದ್ಯಗಳನ್ನ ಆಡಿದ್ದಾರೆ.

ನಾನು ಅವರಿಂದ ಸಾಕಷ್ಟು ಕಲಿತಿದ್ದೇನೆ. ನನಗೆ ಅವರು ಹಿರಿಯ ಸಹೋದರ ಇದ್ದಂತೆ. ನಾವು ಜೊತೆಯಾಗಿ ಅನೇಕ ಟ್ರೋಫಿಗಳನ್ನ ಗೆದ್ದಿದ್ದೇವೆ. ನಮ್ಮಿಬ್ಬರ ನಡುವೆ ಪರಸ್ಪರ ಗೌರವ ಇದೆ. ಧೋನಿ ನಾಯಕತ್ವದ ತಂಡದಲ್ಲಿ ಆಟವಾಡೋದೇ ಒಂದು ಮಜಾ. ಧೋನಿ ಆಟಗಾರರಿಗೆ ಸ್ವಾತಂತ್ರ್ಯ ನೀಡುತ್ತಾರೆ. ಈ ಬಾರಿ ದುಬೈಗೆ ಹೋಗುವ ನಾವು ಎಂಎಸ್​ ಧೋನಿಗಾಗಿ ಟ್ರೋಫಿ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...