alex Certify ಲಿಫ್ಟ್ ನಲ್ಲೇ ಕಾಮುಕನಿಂದ ಕಿರುಕುಳ, ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ದೃಶ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಿಫ್ಟ್ ನಲ್ಲೇ ಕಾಮುಕನಿಂದ ಕಿರುಕುಳ, ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ದೃಶ್ಯ

ಸೂರತ್: ಲಿಫ್ಟ್ ನಲ್ಲೇ ಯುವಕನೊಬ್ಬ 12 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಸೂರತ್ ನಲ್ಲಿ ನಡೆದಿದ್ದು, ಘಟನೆಯ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಲಿಫ್ಟ್ ನಲ್ಲಿ ಒಂಟಿಯಾಗಿದ್ದ ಹುಡುಗಿಯನ್ನು ಯುವಕ ತಬ್ಬಿಕೊಂಡಿದ್ದಾನೆ. ಆತನಿಂದ ತಪ್ಪಿಸಿಕೊಳ್ಳಲು ಬಾಲಕಿ ಪ್ರಯತ್ನಿಸಿದ್ದು, ಲಿಫ್ಟ್ ನಿಲ್ಲಿಸಲು ಸ್ವಿಚ್ ಬಳಿಗೆ ಕೈಚಾಚಿದ್ದಾಳೆ. ಆದರೂ ಯುವಕ ತಡೆಯಲು ಯತ್ನಿಸಿದ್ದು, ಕೊನೆಗೆ ಲಿಫ್ಟ್ ಬಾಗಿಲು ತೆರೆದುಕೊಂಡಿದೆ. ಆಗ ಯುವಕ ಸ್ಥಳದಿಂದ ಪರಾರಿಯಾಗಿದ್ದಾನೆ. ಹುಡುಗಿ ಅಳುತ್ತಾ ಕುಟುಂಬಸ್ಥರನ್ನು ತಲುಪಿದ್ದು, ಕುಟುಂಬದವರು ಪೊಲೀಸ್ ದೂರು ನೀಡಿದ್ದಾರೆ. ಪೊಲೀಸರು ಯುವಕನನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ಸೂರತ್‌ ನ ದಿಂಡೋಲಿ ಪೆವಿಲಿಯನ್ ಪ್ಲಾಜಾದ ಲಿಫ್ಟ್‌ ನಿಂದ ಇಳಿಯುತ್ತಿದ್ದಾಗ ಘಟನೆ ನಡೆದಿದೆ. ಯುವಕನನ್ನು ದಿಂಡೋಳಿ ಪೊಲೀಸರು ಬಂಧಿಸಿದ್ದಾರೆ. ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...