ಪುಷ್ಪಾ ಅಂದ್ರೆ ’ಫ್ಲವರ್’ ಅಲ್ಲ. ಫೈರು…ತಗ್ಗೊದಿಲ್ಲ, ಇದು ಸದ್ಯಕ್ಕೆ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಮನೆಗಳಲ್ಲಿ ಅಭಿನಯಿಸುವ ಡೈಲಾಗ್. ತೆಲುಗಿನ ಸೂಪರ್ಹಿಟ್ ಸಿನಿಮಾ ’’ಪುಷ್ಪಾ’’ ಅಷ್ಟೊಂದು ಮನೆಮಾತಾಗಿದೆ.
ಐಕಾನ್ ಸ್ಟಾರ್ ಅಲ್ಲುಅರ್ಜುನ್ ಮತ್ತು ಕೊಡಗು ಮೂಲದ ಕನ್ನಡತಿ ರಶ್ಮಿಕಾ ಮಂದಣ್ಣ ಅಭಿನಯಿಸಿರುವ ಪಕ್ಕಾ ಗ್ರಾಮೀಣ ತೆಲಂಗಾಣ ಭಾಷೆಯ ಶ್ರೀಮಂತಿಕೆ ಇರುವ ಸಿನಿಮಾ ’ಪುಷ್ಪಾ’.
ಈ ಸಿನಿಮಾ ಐದು ಭಾಷೆಗಳಿಗೆ ಡಬ್ ಆಗಿರುವ ಕಾರಣ ಉ.ಪ್ರ, ಮಧ್ಯಪ್ರದೇಶ, ಮುಂಬಯಿ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಕೇರಳದ ಸ್ಥಳೀಯ ಭಾಷೆಗಳಲ್ಲಿ ಪ್ರೇಕ್ಷಕರನ್ನು ಸುಲಭವಾಗಿ ತಲುಪಿದೆ. ಅದಕ್ಕಾಗಿಯೇ ಏನೋ ’ಪುಷ್ಪಾ ಫೀವರ್’ ಸ್ವಲ್ಪ ಜೋರಾಗಿಯೇ ಇದೆ.
ಗುಜರಾತಿನ ಬಟ್ಟೆ ವ್ಯಾಪಾರದ ಕಾರ್ಖಾನೆ ಎನ್ನಲಾಗುವ ಸೂರತ್ನಲ್ಲಿ ಪುಷ್ಪಾ ಸಿನಿಮಾದ ಕ್ರೇಝ್ ಎಷ್ಟಿದೆ ಎಂದರೆ, ಅರ್ಜುನ್-ರಶ್ಮಿಕಾ ಜೋಡಿಯ ಸಿನಿಮಾದಲ್ಲಿನ ದೃಶ್ಯವೊಂದನ್ನು ಸೀರೆಗಳ ಮೇಲೆ ಪ್ರಿಂಟ್ ಮಾಡಿ ಮಾರಾಟ ಮಾಡಲಾಗುತ್ತಿದೆ…! ಹೌದು, ಪುಷ್ಪಾ ಸೀರೆಗಳಿಗೆ ಭಾರಿ ಬೇಡಿಕೆ ಬಂದು ಬಿಟ್ಟಿದೆ.
ಇಲ್ಲಿದೆ ಇನ್ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ದಕ್ಷಿಣ ಭಾರತೀಯ ನಟರ ಪಟ್ಟಿ
ಚರಣ್ಜೀತ್ ಕಲೆಕ್ಷ ನ್ ಎಂಬ ಅಂಗಡಿಯವರು ವಿಶೇಷವಾಗಿ ಆರ್ಡರ್ ಕೊಟ್ಟು ’ಪುಷ್ಪಾ’ ಸೀರೆಗಳನ್ನು ಮಾಡಿಸಿದ್ದಾರೆ. ರಾಜಸ್ಥಾನ, ಛತ್ತೀಸ್ಗಢ, ಉತ್ತರಪ್ರದೇಶದಲ್ಲಿ ಪುಷ್ಪಾ ಸೀರೆಗಳಿಗೆ ಭರ್ಜರಿ ಬೇಡಿಕೆ ಹುಟ್ಟುಕೊಂಡಿದೆ. 3-ಡಿ ಪ್ರಿಂಟಿಂಗ್ ತಂತ್ರಜ್ಞಾನ ಬಳಸಿ ಸೀರೆಗಳನ್ನು ತಯಾರಿಸಲಾಗಿದೆ ಎಂದು ಅಂಗಡಿ ಮಾಲೀಕ ಚರಣ್ಪಾಲ್ ಸಿಂಗ್ ತಿಳಿಸಿದ್ದಾರೆ.
ಅಂದಹಾಗೆ, ಪುಷ್ಪಾ ಸಿನಿಮಾ ವಿದೇಶಗಳಲ್ಲೂ ತೆರೆಕಂಡಿದೆ. ಇದುವರೆಗೂ ಸಿನಿಮಾ ಬಾಚಿರುವುದು ಸುಮಾರು 300 ಕೋಟಿ ರೂ. ಸದ್ಯ ಬಿಡುಗಡೆಗೊಂಡಿರುವ ’ಪುಷ್ಪಾ:ದಿ ರೈಸ್’ ಮೊದಲ ಭಾಗ ಮಾತ್ರವೇ ಎನ್ನಲಾಗುತ್ತಿದೆ. ಮತ್ತೊಂದು ಭಾಗದಲ್ಲಿ ಪುಷ್ಪಾ ಮುಂದಿನ ವರ್ಷ ತೆರೆಗೆ ಅಪ್ಪಳಿಸಲಿದೆ ಎಂದು ಸಿನಿಮಾ ನಿರ್ಮಾಣ ತಂಡ ಹೇಳಿಕೊಂಡಿದೆ. ಮುಖ್ಯವಾಗಿ ಮಲಯಾಳಂನ ಜನಪ್ರಿಯ ನಟ ಫಹಾದ್ ಫಾಸಿಲ್ ಅವರು ಪುಷ್ಪಾ ಸಿನಿಮಾದ ಅಂತ್ಯದಲ್ಲಿ ಸ್ವಲ್ಪ ಸಮಯಕ್ಕೆ ಮಾತ್ರವೇ ಕಾಣಿಸಿಕೊಂಡಿದ್ದಾರೆ. ವಿಚಿತ್ರ ಹಾವಭಾವಗಳ ಪಾತ್ರಕ್ಕೆ ಹೆಸರುವಾಸಿಯಾದ ’ಫಾಫಾ’ ಮತ್ತಷ್ಟು ಮನರಂಜನೆಯನ್ನು ಪುಷ್ಪಾ-2ನಲ್ಲಿ ಉಣಬಿಡಿಸುವ ನಿರೀಕ್ಷೆ ಇದೆ.