alex Certify ಸಿನಿಮಾ ಸ್ಟೋರಿಯಂತಿದೆ ಈ ಗ್ಯಾಂಗ್‌ ಸ್ಟರ್‌ ಬಂಧನದ ಕಥೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿನಿಮಾ ಸ್ಟೋರಿಯಂತಿದೆ ಈ ಗ್ಯಾಂಗ್‌ ಸ್ಟರ್‌ ಬಂಧನದ ಕಥೆ…!

Surat Police arrests gangster Sajju Kothari from a bunker - India News

ಸೂರತ್ ಪೊಲೀಸ್ ಕ್ರೈಂ ಬ್ರಾಂಚ್ ತಂಡವು ಕುಖ್ಯಾತ ಕ್ರಿಮಿನಲ್, ಗ್ಯಾಂಗ್ ಸ್ಟರ್ ಸಜ್ಜು ಕೊಠಾರಿಯನ್ನು ಸೂರತ್‌ನ ನಾನ್ಪುರ ಪ್ರದೇಶದಲ್ಲಿನ ಜಮ್ರುಖ್ ಗಲಿ ನಿವಾಸದ ಬಂಕರ್‌ನಲ್ಲಿ ಅಡಗಿದ್ದಾಗ ಬಂಧಿಸಿದೆ. ಸಜ್ಜು ಅಡಗಿದ್ದ ಮನೆಗೆ ಹೊರಗಿನಿಂದ ಬೀಗ ಹಾಕಲಾಗಿತ್ತು. ಅದರ ಗೋಡೆಗಳಿಗೆ ಉಕ್ಕಿನ ಸ್ಪೈಕ್‌ಗಳನ್ನು ಜೋಡಿಸಿತ್ತು.

ಪೊಲೀಸ್ ತಂಡ ಏಣಿ ವ್ಯವಸ್ಥೆ ಮಾಡಿಕೊಂಡು ಮೊದಲ ಮಹಡಿ ತಲುಪಿತು. ನಂತರ ಕಿಟಕಿಯ ಗಾಜು ಒಡೆದು ಒಳ ಪ್ರವೇಶಿಸಿ ಇಡೀ ಕಟ್ಟಡವನ್ನು ಶೋಧಿಸಿದೆ. ಫರ್ನೀಚರ್ ವಾಲ್ ಬಡಿದಾಗ ವಿಭಿನ್ನ ಶಬ್ದ ಕೇಳಿತು, ಒಳಗೆ ಟೊಳ್ಳಾದ ವಿಭಾಗವಿದೆ ಎಂದು ಖಚಿತಪಡಿಸಿಕೊಂಡಿತು.

BIG NEWS: ಟ್ರ್ಯಾಕ್ಟರ್ – ಬೈಕ್ ನಡುವೆ ಭೀಕರ ಅಪಘಾತ; ತಂದೆ-ಮಗ ಸ್ಥಳದಲ್ಲೇ ದುರ್ಮರಣ

ಬಲ‌ಪ್ರಯೋಗ ಮಾಡಿ ಶೋಕೇಸ್‌ನ ಹಿಂದೆ ರಹಸ್ಯ ಬಂಕರ್‌ಗೆ ದಾರಿಯನ್ನು ಕಂಡುಕೊಂಡರು, ಬಳಿಕ ಗ್ಯಾಂಗ್ ಸ್ಟರ್‌ನನ್ನು ಬಂಧಿಸಿದ್ದಾರೆ.

40ಕ್ಕೂ ಹೆಚ್ಚು ಪೊಲೀಸರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಗ್ಯಾಂಗ್‌ಸ್ಟರ್ ವಿರುದ್ಧ ಗುಜರಾತ್ ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧಗಳ ಕಠಿಣ ನಿಯಂತ್ರಣ ಕಾಯ್ದೆಯಡಿ ಎರಡು ಬಾರಿ ಪ್ರಕರಣ ದಾಖಲಿಸಲಾಗಿದೆ.

ಆತ ಅಪಹರಣ, ಸುಲಿಗೆ, ಲೂಟಿ ಮತ್ತು ಇತರ ಅನೇಕ ಅಪರಾಧ ನಡೆಸುತ್ತಿದ್ದ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...