ಅಂತರ್ಜಾಲದಲ್ಲಿ ಕ್ರೇಜಿ ಖಾದ್ಯಗಳ ಸುದ್ದಿಗಳಿಗೇನೂ ಕಮ್ಮಿ ಇಲ್ಲ. ತೀರಾ ಹೀಗೂ ಮಾಡಬಹುದೇ ಎಂದು ಹುಬ್ಬೇರುವಂತ ಬಹಳಷ್ಟು ಐಟಂಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಲೇ ಇರುತ್ತವೆ.
ಇಂಥದ್ದೇ ಒಂದು ನಿದರ್ಶನದಲ್ಲಿ; ಸೂರತ್ ನ ವರ್ತಕರೊಬ್ಬರು ’ಫಾಂಟಾ ಆಮ್ಲೆಟ್’ ಆವಿಷ್ಕರಿಸಿದ್ದಾರೆ. ಕಾರ್ಬೋನೇಟೆಡ್ ಪೇಯವನ್ನು ಮೊಟ್ಟೆಯೊಂದಿಗೆ ಬೆರೆಸಿ ಮಾಡುವ ಆಮ್ಲೆಟ್ ಅನ್ನು ’ಸಾರ್ವಜನಿಕರ ಬೇಡಿಕೆ’ ಮೇರೆಗೆ ಸಿದ್ಧಪಡಿಸಲಾಗಿದೆ ಎಂದು ಫುಡ್ ಜಾಯಿಂಟ್‌ನ ಮಾಲೀಕ ಹಾಗೂ ಶೆಫ್ ತಿಳಿಸಿದ್ದಾರೆ.
ಬೆಂಕಿಯುಗುಳುತ್ತೆ ಈ ವಿಶಿಷ್ಟ ಕಾರು….!
’ಫಾಂಟಾ ಫ್ರೈ’ ಎಂದು ಕರೆಯಲಾಗುವ ಈ ಖಾದ್ಯ ಸಿಹಿ ಹಾಗೂ ಮಸಾಲೆಭರಿತವಾಗಿದ್ದು, ಆಮ್ಲೆಟ್ ಹಾಗೂ ಕುದಿಸಿದ ಮೊಟ್ಟೆಗಳೆರಡನ್ನೂ ಹೊಂದಿದೆ. ಅಂದ ಹಾಗೆ ಇದರ ಬೆಲೆ; ಪ್ಲೇಟ್‌ಗೆ 250 ರೂಪಾಯಿ.
ಒಂದು ವೇಳೆ ನೀವು ಫಾಂಟಾ ಇಷ್ಟ ಪಡದೇ ಇದ್ದಲ್ಲಿ ನಿಮಗೆ ಥಂಬ್ಸ್ ಅಪ್ ಫ್ರೈ, ಲಿಮ್ಕಾ ಫ್ರೈಗಳು ಸಹ ಇವೆ ಎನ್ನುತ್ತಾರೆ ಜಾಯಿಂಟ್ ಮಾಲೀಕರು.