ಪಂಚಾಯತ್ ಚುನಾವಣೆಯಲ್ಲಿ ಸೋತಿದ್ದ ಅಭ್ಯರ್ಥಿಯನ್ನು ಗೆದ್ದ ವ್ಯಕ್ತಿಯ ಬೆಂಬಲಿಗರು ಹತ್ಯೆ ಮಾಡಿದ ಘಟನೆಯು ಬಿಹಾರದ ಪೂರ್ವ ಚಂಪಾರಣ್ನಲ್ಲಿ ನಡೆದಿದೆ. ಪೂರ್ವ ಚಂಪಾರಣ್ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸೋತಿದ್ದ 50 ವರ್ಷದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆಗೈಯಲಾಗಿದೆ.
ಮೃತ ವ್ಯಕ್ತಿಯನ್ನು ಬಬುಲ್ ಹಾಸನ್ ಎಂದು ಗುರುತಿಸಲಾಗಿದೆ. ಚುನಾವಣೆಯಲ್ಲಿ 45 ವರ್ಷದ ಇಮ್ಯಾನ್ಯುವಲ್ ಹಸನ್ ವಿಜೇತರಾಗಿದ್ದರೆ ಮೃತ ಬಬುಲ್ ಎರಡನೇ ಸ್ಥಾನ ಪಡೆದಿದ್ದರು.
ಇಮ್ಯಾನುವಲ್ ಹಸನ್ ವಿರುದ್ಧ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದ ಬಾಬುಲ್ ಹಸನ್ ವಿರುದ್ಧ ಇಮ್ಯಾನುಬಲ್ ಬೆಂಬಲಿಗರು ಆಕ್ರೋಶ ಹೊರಹಾಕಿದ್ದರು. ಇದೇ ವಿಚಾರವಾಗಿ ಇಬ್ಬರು ಗುಂಪುಗಳ ನಡುವೆ ವಾಗ್ವಾದ ಕೂಡ ಏರ್ಪಟ್ಟಿತ್ತು ಎಂದು ರಕ್ಸಾಲ್ ಉಪವಿಭಾಗೀಯ ಪೊಲೀಸ್ ಅಧಿಕಾರಿ ಚಂದ್ರಪ್ರಕಾಶ್ ಹೇಳಿದ್ದಾರೆ.
ಕೋಪದ ಭರದಲ್ಲಿ ಗೆದ್ದ ಸದಸ್ಯನ ಗುಂಪು ಬಾಬುಲ್ ಹಸನ್ಗೆ ರಾಡ್ನಿಂದ ಹೊಡೆದು ತೀವ್ರವಾಗಿ ಗಾಯ ಮಾಡಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಬುಲ್ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಅಧಿಕಾರಿ ಚಂದ್ರಪ್ರಕಾಶ್ ಹೇಳಿದ್ರು.
ಆದರೆ ಈ ಘಟನೆಯ ಬಳಿಕ ಗ್ರಾಮದಲ್ಲಿ ಆತಂಕ ಹೆಚ್ಚಾಗಿದೆ. ಗ್ರಾಮದಲ್ಲಿ ಪೊಲೀಸರನ್ನು ಭದ್ರತೆಗೆಂದು ನೇಮಿಸಲಾಗಿದೆ. ಗ್ರಾಮದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಚಂದ್ರಪ್ರಕಾಶ್ ಹೇಳಿದ್ದಾರೆ. ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.