alex Certify ನಾಳೆ ತೆರೆ ಮೇಲೆ ಬರಲಿದೆ ‘supplier ಶಂಕರ’ ಸಿನಿಮಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಳೆ ತೆರೆ ಮೇಲೆ ಬರಲಿದೆ ‘supplier ಶಂಕರ’ ಸಿನಿಮಾ

Supplier Shankara

ರಂಜಿತ್ ಸಿಂಗ್ ರಜಪೂತ್ ಆಕ್ಷನ್ ಕಟ್ ಹೇಳಿರುವ ‘ಸಪ್ಲೇಯರ್ ಶಂಕರ’ ಸಿನಿಮಾ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಈ ಚಿತ್ರದಲ್ಲಿ ‘ಟಾಮ್ ಅಂಡ್ ಜೆರ್ರಿ’ ಖ್ಯಾತಿಯ ನಿಶ್ಚಿತ್ ಕೊರೋಡಿ ನಾಯಕ ನಟನಾಗಿದ್ದು, ಬಾರ್ ಸಪ್ಲೈಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಜೋಡಿಯಾಗಿ ದೀಪಿಕಾ ಆರಾಧ್ಯ ಅಭಿನಯಿಸಿದ್ದಾರೆ.

ಈ ಚಿತ್ರವನ್ನು ತ್ರಿನೇತ್ರ ಫಿಲಂ ಬ್ಯಾನರ್ ನಲ್ಲಿ ಚಂದ್ರಶೇಖರ್ ಮತ್ತು ನಾಗೇಂದ್ರ ಸಿಂಗ್ ನಿರ್ಮಾಣ ಮಾಡಿದ್ದು, ನಿಶ್ಚಿತ್ ಕೊರೋಡಿ ಹಾಗೂ ದೀಪಿಕಾ ಆರಾಧ್ಯ ಸೇರಿದಂತೆ ಗೋಪಾಲಕೃಷ್ಣ ದೇಶಪಾಂಡೆ, ಜ್ಯೋತಿ ರೈ, ವಿಜಯ್ ವಿಶ್ವನಾಥ್, ನವೀನ್ ಡಿ ಪಡೀಲ್ ತೆರೆ ಹಂಚಿಕೊಂಡಿದ್ದಾರೆ.

ಸತೀಶ್ ಚಂದ್ರ ಸಂಕಲನ, ಹಾಗೂ ಸತೀಶ್ ಕುಮಾರ್ ಛಾಯಾಗ್ರಹಣವಿದೆ ಆರ್ ಬಿ ಭರತ್ ಸಂಗೀತ ಸಂಯೋಜನೆ ನೀಡಿದ್ದಾರೆ. ಇದೊಂದು ಆಕ್ಷನ್ ಲವ್ ಸ್ಟೋರಿ ಕಥಾಹಂದರ ಹೊಂದಿರುವ ಸಿನಿಮಾ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...