ಬ್ಯಾಟರಿ ತಂತ್ರಜ್ಞಾನದ ಸ್ಟಾರ್ಟಪ್ ಲಾಗ್9 ಮೆಟೀರಿಯಲ್ಸ್ ದೇಶದಲ್ಲಿಯೇ ಅತ್ಯಂತ ವೇಗವಾಗಿ ಚಾರ್ಜ್ ಆಗಬಲ್ಲ ದ್ವಿಚಕ್ರ ವಾಣಿಜ್ಯ ವಾಹನವನ್ನು ಹೈದರಾಬಾದ್ ಮೂಲದ ಇವಿ ಸಂಸ್ಥೆ ಕ್ವಾಂಟಮ್ ಎನರ್ಜಿಯೊಂದಿಗೆ ಘೋಷಿಸಿದೆ.
’ಬ್ಯುಸಿನೆಸ್‌ಲೈಟ್ ಇನ್ಸ್ಟಾಚಾರ್ಜ್ಡ್ ಬೈ ಲಾಗ್9’ ಹೆಸರಿನ ಈ ಸ್ಕೂಟರ್‌ಗೆ ಲಾಗ್9 ರ‍್ಯಾಪಿಡ್‌ಎಕ್ಸ್ 2000 ಬ್ಯಾಟರಿಗಳನ್ನು ಅಳವಡಿಸಲಾಗಿದೆ, ಈ ಬ್ಯಾಟರಿ 12 ನಿಮಿಷಗಳಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ ಎನ್ನಲಾಗಿದೆ.
ಒಮ್ಮೆ ಪೂರ್ಣವಾಗಿ ಚಾರ್ಜ್ ಮಾಡಿದರೆ 80-90 ಕಿಮೀ ಚಲಿಸಬಲ್ಲ ಈ ಸ್ಕೂಟರ್‌ನ ವೇಗ, ವೇಗೋತ್ಕರ್ಷಣೆ, ಮಲ್ಟಿ ಥೆಫ್ಟ್ ಅಲಾರ್ಮ್ ಹಾಗೂ ಮಲ್ಟಿಪಲ್ ಚಾಲನಾ ಮೋಡ್‌ಗಳು ಆಕರ್ಷಕ ವೈಶಿಷ್ಟ್ಯತೆಗಳಾಗಿವೆ.
ಮಾರ್ಚ್ 2024ರೊಳಗೆ ಈ ಸ್ಕೂಟರ್‌ನ 10,000 ಘಟಕಗಳನ್ನು ದೇಶಾದ್ಯಂತ ಬಿಡುಗಡೆ ಮಾಡಲು ಲಾಗ್9 ಹಾಗೂ ಕ್ವಾಂಟಮ್ ಎನರ್ಜಿಗಳು ಸಿದ್ಧತೆ ಮಾಡಿಕೊಂಡಿವೆ. ಈ ವಾಹನಗಳು ಇ-ಕಾಮರ್ಸ್, ಫುಡ್ ಡೆಲಿವರಿ ಮತ್ತು ಕೊರಿಯರ್ ಸೇವೆಗಳಂಥ ಕೆಲಸಗಳಿಗೆ ಹೇಳಿ ಮಾಡಿಸಿದಂತೆ ಇವೆ ಎನ್ನಲಾಗಿದೆ.