alex Certify ಕಾರ್‌ ʼಸೀಟ್‌ ಬೆಲ್ಟ್‌ʼ ಬಳಿಕ ಈಗ ʼಸನ್‌ ರೂಫ್‌ʼ ಕುರಿತು ಆರಂಭವಾಗಿದೆ ಚರ್ಚೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರ್‌ ʼಸೀಟ್‌ ಬೆಲ್ಟ್‌ʼ ಬಳಿಕ ಈಗ ʼಸನ್‌ ರೂಫ್‌ʼ ಕುರಿತು ಆರಂಭವಾಗಿದೆ ಚರ್ಚೆ

ಇತ್ತೀಚಿನ ಕಾರುಗಳಲ್ಲಿ ಸನ್​ ರೂಫ್ ಇರಬೇಕೆಂಬುದು ಗ್ರಾಹಕರ ಸಾಮಾನ್ಯ ಬೇಡಿಕೆಯಾಗಿದೆ. ಕಾರು ಕಂಪನಿಗಳೂ ಸಹ ಆದ್ಯತೆ ಕೊಡುತ್ತಿವೆ.

ಇತ್ತೀಚೆಗೆ ಜೆಟ್​ ಏರ್​ವೇಸ್​ ಸಿಇಒ ಸಂಜೀವ್​ ಕಪೂರ್​ ಅವರು ಪ್ರಯಾಣಿಸುತ್ತಿದ್ದ ಕಾರಿನ ಸನ್​ರೂಫ್​ನಿಂದ ಮಗು ತಲೆ ಹೊರಗೆ ಹಾಕಿ ನಿಂತಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಾಗಿನಿಂದ ಈ ವಿಷಯವಾಗಿ ಚರ್ಚೆ ಆರಂಭವಾಗಿದೆ.

ಚಿತ್ರವನ್ನು ಪೋಸ್ಟ್​ ಮಾಡುವ ಜೊತೆಗೆ ಸಂಜೀವ್​ ಕಪೂರ್​ ಹಲವಾರು ಪ್ರಶ್ನೆಗಳನ್ನು ಸಹ ಟ್ವೀಟ್​ ಮಾಡಿದ್ದರು. ಗುರುಗ್ರಾಮ್​ನ ಗಾಲ್ಫ್​ ಕೋರ್ಸ್​ ರಸ್ತೆಯಲ್ಲಿ ಸನ್​ರೂಫ್​ನಿಂದ ತಂಗಾಳಿಯನ್ನು ಆನಂದಿಸುತ್ತಿರುವ ಮಗು. ನಾವು ಎಲ್ಲಿ ವಿಫಲರಾಗಿದ್ದೇವೆ? ಶಾಲೆಯಲ್ಲಿ? ಅಥವಾ ಪೋಷಕರಲ್ಲಿ, ಅಥವಾ ಎರಡರಲ್ಲಿ? ಎಂದು ಪ್ರಶ್ನೆ ಹಾಕಿದ್ದಾರೆ.

ನೆಟ್ಟಿಗರಲ್ಲಿ ಕೆಲವರು ಈ ಪ್ರಶ್ನೆಗೇ ಆಕ್ಷೇಪ ಎತ್ತಿದ್ದಾರೆ. ಮಗುವಿನ ತಂದೆಯ ಕಾರು, ತಂದೆಯ ಆಯ್ಕೆ, ಮಗು ಎಲ್ಲಿ ಬೇಕಾದರೂ ತಂಗಾಳಿಯನ್ನು ಆನಂದಿಸಬಹುದು, ಯಾರೂ ಎಲ್ಲಿಯೂ ವಿಫಲವಾಗಿಲ್ಲ ಎಂದು ಟ್ವಿಟರ್​ ಬಳಕೆದಾರರೊಬ್ಬರು ಚುಚ್ಚಿ ಬರೆದಿದ್ದಾರೆ.

ಈ ಟ್ವೀಟ್​ಗೆ ಪ್ರತಿಕ್ರಿಯಿಸಿದ ಕಪೂರ್​, ಟಾಟಾ ಮಾಜಿ ಸಿಇಒ ಅಧ್ಯಕ್ಷ ಸೈರಸ್​ ಮಿಸ್ತ್ರಿ ಅವರ ಇತ್ತೀಚಿನ ಮಾರಣಾಂತಿಕ ಕಾರು ಅಪಘಾತವನ್ನು ಉಲ್ಲೇಖಿಸಿ, ನಾವು ಕಡ್ಡಾಯ ಏರ್​ಬ್ಯಾಗ್​ ಮತ್ತು ಹಿಂದಿನ ಸೀಟಿನಲ್ಲಿ ಸೀಟ್​ ಬೆಲ್ಟ್​ಗಳ ಬಗ್ಗೆ ಮಾತನಾಡುತ್ತಿದ್ದೇವೆ ಎಂದಿದ್ದಾರೆ.

ಅಷ್ಟೇ ಅಲ್ಲದೇ, ಸನ್​ರೂಫ್​ ಸುರಕ್ಷಿತವೇ ಎಂದು ಕಪೂರ್​ ಅವರು ತ್ವರಿತ ಸಮೀಕ್ಷೆಯನ್ನು ಸಹ ನಡೆಸಿದರು, ಇದರಲ್ಲಿ ಪಾಲ್ಗೊಂಡು ಪ್ರತಿಕ್ರಿಯಿಸಿದ ಹೆಚ್ಚಿನವರು ಅಂದರೆ ಶೇ.67 ಕ್ಕಿಂತ ಹೆಚ್ಚು ಜನರು ಅಪಾಯ ಇದೆ ಎಂದಿದ್ದಾರೆ. ಶೇ.32.4 ಜನರು ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...