ಇತ್ತೀಚಿನ ಕಾರುಗಳಲ್ಲಿ ಸನ್ ರೂಫ್ ಇರಬೇಕೆಂಬುದು ಗ್ರಾಹಕರ ಸಾಮಾನ್ಯ ಬೇಡಿಕೆಯಾಗಿದೆ. ಕಾರು ಕಂಪನಿಗಳೂ ಸಹ ಆದ್ಯತೆ ಕೊಡುತ್ತಿವೆ.
ಇತ್ತೀಚೆಗೆ ಜೆಟ್ ಏರ್ವೇಸ್ ಸಿಇಒ ಸಂಜೀವ್ ಕಪೂರ್ ಅವರು ಪ್ರಯಾಣಿಸುತ್ತಿದ್ದ ಕಾರಿನ ಸನ್ರೂಫ್ನಿಂದ ಮಗು ತಲೆ ಹೊರಗೆ ಹಾಕಿ ನಿಂತಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಾಗಿನಿಂದ ಈ ವಿಷಯವಾಗಿ ಚರ್ಚೆ ಆರಂಭವಾಗಿದೆ.
ಚಿತ್ರವನ್ನು ಪೋಸ್ಟ್ ಮಾಡುವ ಜೊತೆಗೆ ಸಂಜೀವ್ ಕಪೂರ್ ಹಲವಾರು ಪ್ರಶ್ನೆಗಳನ್ನು ಸಹ ಟ್ವೀಟ್ ಮಾಡಿದ್ದರು. ಗುರುಗ್ರಾಮ್ನ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಸನ್ರೂಫ್ನಿಂದ ತಂಗಾಳಿಯನ್ನು ಆನಂದಿಸುತ್ತಿರುವ ಮಗು. ನಾವು ಎಲ್ಲಿ ವಿಫಲರಾಗಿದ್ದೇವೆ? ಶಾಲೆಯಲ್ಲಿ? ಅಥವಾ ಪೋಷಕರಲ್ಲಿ, ಅಥವಾ ಎರಡರಲ್ಲಿ? ಎಂದು ಪ್ರಶ್ನೆ ಹಾಕಿದ್ದಾರೆ.
ನೆಟ್ಟಿಗರಲ್ಲಿ ಕೆಲವರು ಈ ಪ್ರಶ್ನೆಗೇ ಆಕ್ಷೇಪ ಎತ್ತಿದ್ದಾರೆ. ಮಗುವಿನ ತಂದೆಯ ಕಾರು, ತಂದೆಯ ಆಯ್ಕೆ, ಮಗು ಎಲ್ಲಿ ಬೇಕಾದರೂ ತಂಗಾಳಿಯನ್ನು ಆನಂದಿಸಬಹುದು, ಯಾರೂ ಎಲ್ಲಿಯೂ ವಿಫಲವಾಗಿಲ್ಲ ಎಂದು ಟ್ವಿಟರ್ ಬಳಕೆದಾರರೊಬ್ಬರು ಚುಚ್ಚಿ ಬರೆದಿದ್ದಾರೆ.
ಈ ಟ್ವೀಟ್ಗೆ ಪ್ರತಿಕ್ರಿಯಿಸಿದ ಕಪೂರ್, ಟಾಟಾ ಮಾಜಿ ಸಿಇಒ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರ ಇತ್ತೀಚಿನ ಮಾರಣಾಂತಿಕ ಕಾರು ಅಪಘಾತವನ್ನು ಉಲ್ಲೇಖಿಸಿ, ನಾವು ಕಡ್ಡಾಯ ಏರ್ಬ್ಯಾಗ್ ಮತ್ತು ಹಿಂದಿನ ಸೀಟಿನಲ್ಲಿ ಸೀಟ್ ಬೆಲ್ಟ್ಗಳ ಬಗ್ಗೆ ಮಾತನಾಡುತ್ತಿದ್ದೇವೆ ಎಂದಿದ್ದಾರೆ.
ಅಷ್ಟೇ ಅಲ್ಲದೇ, ಸನ್ರೂಫ್ ಸುರಕ್ಷಿತವೇ ಎಂದು ಕಪೂರ್ ಅವರು ತ್ವರಿತ ಸಮೀಕ್ಷೆಯನ್ನು ಸಹ ನಡೆಸಿದರು, ಇದರಲ್ಲಿ ಪಾಲ್ಗೊಂಡು ಪ್ರತಿಕ್ರಿಯಿಸಿದ ಹೆಚ್ಚಿನವರು ಅಂದರೆ ಶೇ.67 ಕ್ಕಿಂತ ಹೆಚ್ಚು ಜನರು ಅಪಾಯ ಇದೆ ಎಂದಿದ್ದಾರೆ. ಶೇ.32.4 ಜನರು ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
https://twitter.com/TheSanjivKapoor/status/1569318056564002816?ref_src=twsrc%5Etfw%7Ctwcamp%5Etweetembed%7Ctwterm%5E1569318652448755712%7Ctwgr%5Ea5699c5da5524bf287cd7aa9c6bea9873c2a882b%7Ctwcon%5Es2_&ref_url=https%3A%2F%2Fwww.india.com%2Fviral%2Fsunroof-in-cars-jet-airways-ceo-sanjiv-kapoor-tweet-how-safe-is-sunroof-have-your-say-5632695%2F