alex Certify BREAKING: ಮೊಟ್ಟ ಮೊದಲ ಬಾರಿಗೆ ಬಿಜೆಪಿ ಪಾಲಾದ ಮೈಸೂರು ಪಾಲಿಕೆ ಮೇಯರ್​ ಪಟ್ಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಮೊಟ್ಟ ಮೊದಲ ಬಾರಿಗೆ ಬಿಜೆಪಿ ಪಾಲಾದ ಮೈಸೂರು ಪಾಲಿಕೆ ಮೇಯರ್​ ಪಟ್ಟ

ತೀವ್ರ ಕುತೂಹಲ ಕೆರಳಿಸಿದ್ದ ಮೈಸೂರು ಪಾಲಿಕೆ ಚುನಾವಣೆಗೆ ಕೊನೆಗೂ ತೆರೆ ಬಿದ್ದಿದೆ. ಮೈಸೂರು ಮೇಯರ್​ ಆಗಿ ಬಿಜೆಪಿಯ ಸುನಂದಾ ನೇತ್ರಪಾಲಾ ಆಯ್ಕೆಯಾಗಿದ್ದಾರೆ. ಇದೇ ಮೊಟ್ಟ ಮೊದಲ ಬಾರಿಗೆ ಮೈಸೂರು ಮೇಯರ್​ ಪಟ್ಟ ಬಿಜೆಪಿ ಪಾಳಯದ ಪಾಲಾಗಿದೆ.

ಮೈಸೂರು ಮೇಯರ್​ ಪಟ್ಟ ಯಾರ ಪಾಲಾಗುತ್ತೆ ಎಂಬ ಪ್ರಶ್ನೆ ಭಾರೀ ಕುತೂಹಲ ಕೆರಳಿಸಿತ್ತು. ಮೇಯರ್​ ಸ್ಥಾನಕ್ಕಾಗಿ ಕಾಂಗ್ರೆಸ್​ ಹಾಗೂ ಜೆಡಿಎಸ್​ ಜಿದ್ದಾಜಿದ್ದಿ ನಡುವೆಯೇ ಇದೇ ಮೊದಲ ಬಾರಿಗೆ ಬಿಜೆಪಿ ಕೂಡ ಕಣಕ್ಕೆ ಇಳಿದಿತ್ತು.

ಜೆಡಿಎಸ್​ನಿಂದ ಅಶ್ವಿನಿ ಅನಂತ್​, ಬಿಜೆಪಿಯಿಂದ ಸುನಂದಾ ಪಾಲನೇತ್ರಾ ಹಾಗೂ ಕಾಂಗ್ರೆಸ್​ನಿಂದ ಶಾಂತಕುಮಾರಿ ಕಣಕ್ಕೆ ಇಳಿದಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್​ – ಜೆಡಿಎಸ್​ ಮೈತ್ರಿ ಮಾಡಿಕೊಳ್ಳಲಿದೆ ಎಂಬ ವದಂತಿ ನಡುವೆಯೇ ಪ್ರತ್ಯೇಕ ಅಭ್ಯರ್ಥಿಗಳನ್ನು ಉಭಯ ಪಕ್ಷಗಳು ಕಣಕ್ಕೆ ಇಳಿಸಿದ್ದವು.

ಆದರೆ ಇದೇ ಮೊಟ್ಟ ಮೊದಲ ಬಾರಿಗೆ ಬಿಜೆಪಿ ಮೈಸೂರು ಮೇಯರ್​ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಸುನಂದಾ ನೇತ್ರಪಾಲಾಗೆ ಇನ್ನು ಕೇವಲ ಆರು ತಿಂಗಳು ಮಾತ್ರ ಅಧಿಕಾರಾವಧಿ ಇರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...