ತೀವ್ರ ಕುತೂಹಲ ಕೆರಳಿಸಿದ್ದ ಮೈಸೂರು ಪಾಲಿಕೆ ಚುನಾವಣೆಗೆ ಕೊನೆಗೂ ತೆರೆ ಬಿದ್ದಿದೆ. ಮೈಸೂರು ಮೇಯರ್ ಆಗಿ ಬಿಜೆಪಿಯ ಸುನಂದಾ ನೇತ್ರಪಾಲಾ ಆಯ್ಕೆಯಾಗಿದ್ದಾರೆ. ಇದೇ ಮೊಟ್ಟ ಮೊದಲ ಬಾರಿಗೆ ಮೈಸೂರು ಮೇಯರ್ ಪಟ್ಟ ಬಿಜೆಪಿ ಪಾಳಯದ ಪಾಲಾಗಿದೆ.
ಮೈಸೂರು ಮೇಯರ್ ಪಟ್ಟ ಯಾರ ಪಾಲಾಗುತ್ತೆ ಎಂಬ ಪ್ರಶ್ನೆ ಭಾರೀ ಕುತೂಹಲ ಕೆರಳಿಸಿತ್ತು. ಮೇಯರ್ ಸ್ಥಾನಕ್ಕಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಜಿದ್ದಾಜಿದ್ದಿ ನಡುವೆಯೇ ಇದೇ ಮೊದಲ ಬಾರಿಗೆ ಬಿಜೆಪಿ ಕೂಡ ಕಣಕ್ಕೆ ಇಳಿದಿತ್ತು.
ಜೆಡಿಎಸ್ನಿಂದ ಅಶ್ವಿನಿ ಅನಂತ್, ಬಿಜೆಪಿಯಿಂದ ಸುನಂದಾ ಪಾಲನೇತ್ರಾ ಹಾಗೂ ಕಾಂಗ್ರೆಸ್ನಿಂದ ಶಾಂತಕುಮಾರಿ ಕಣಕ್ಕೆ ಇಳಿದಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿದೆ ಎಂಬ ವದಂತಿ ನಡುವೆಯೇ ಪ್ರತ್ಯೇಕ ಅಭ್ಯರ್ಥಿಗಳನ್ನು ಉಭಯ ಪಕ್ಷಗಳು ಕಣಕ್ಕೆ ಇಳಿಸಿದ್ದವು.
ಆದರೆ ಇದೇ ಮೊಟ್ಟ ಮೊದಲ ಬಾರಿಗೆ ಬಿಜೆಪಿ ಮೈಸೂರು ಮೇಯರ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಸುನಂದಾ ನೇತ್ರಪಾಲಾಗೆ ಇನ್ನು ಕೇವಲ ಆರು ತಿಂಗಳು ಮಾತ್ರ ಅಧಿಕಾರಾವಧಿ ಇರಲಿದೆ.